ಶಾಸಕಿ ಕರೆಮ್ಮಾ ಜಿ. ನಾಯಕ್‌ಗೆ ಜೀವ ಬೆದರಿಕೆ ಆರೋಪ: 60 ಜನರ ವಿರುದ್ಧ ಪ್ರಕರಣ ದಾಖಲು
Update: 2026-01-20 23:17 IST
ರಾಯಚೂರು: ದೇವದುರ್ಗ ಶಾಸಕಿ ಕರೆಮ್ಮಾ ಜಿ. ನಾಯಕ್ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ ಶ್ರೀನಿವಾಸ ನಾಯಕ್ ಸೇರಿ 60 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಶ್ರೀದೇವಿ ನಾಯಕ್ ಸಹೋದರ ಶ್ರೀನಿವಾಸ ನಾಯಕ ನೇತೃತ್ವದ ತಂಡ ಮನೆಗೆ ಭೇಟಿ ನೀಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಶಾಸಕಿ ಕರೆಮ್ಮಾ ಜಿ. ನಾಯಕ್ ಆರೋಪಿಸಿದ್ದರು.
ಜೆಡಿಎಸ್ ಮುಖಂಡ ವಕೀಲ ಹನುಮಂತರಾಯ್ ಅವರು ನೀಡಿದ ದೂರಿನ ಮೇರೆಗೆ ಶ್ರೀನಿವಾಸ್ ನಾಯಕ್, ರವಿ ಪ್ರಕಾಶ್ ಅಕ್ಕರಕಿ, ಸುರೇಶ್ ನಾಯಕ್ ಚಿಂತಲಕುಂಟ, ವೀರೇಶ ಗೌಡ, ಯಾಟಗಲ್, ಹನುಮಂತ್ರಾಯ ಕರಿಗುಡ್ಡ, ಅಮರೇಶ ಅಂಜಳ ಸೇರಿ ಇತರೆ 60 ಜನರ ವಿರುದ್ಧ ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ.