ಹಟ್ಟಿ ಚಿನ್ನದ ಗಣಿ ಖಾಸಗೀಕರಣದಿಂದ ಉಳಿಸಬೇಕು: ಆರ್. ಮಾನಸಯ್ಯ
ರಾಯಚೂರು:ಹಟ್ಟಿ ಚಿನ್ನದ ಗಣಿ ಕಂಪೆನಿ ಆಡಳಿತ ಗಣಿ ವಿಭಾಗದ ಕಾರ್ಮಿಕರು ಕೆಲಸ ಮಾಡುತ್ತಿಲ್ಲ ಎಂದು ಆರೋಪ ಮಾಡಿ ಗಣಿ ವಿಭಾಗವನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಸಿದೆ. ಕಾರ್ಮಿಕರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಟಿಯುಸಿಐ ಮುಖಂಡ ಆರ್. ಮಾನಸಯ್ಯ ಹೇಳಿದರು.
ಹಟ್ಟಿ ಚಿನ್ನದ ಗಣಿ ಕಂಪನಿಯ ಕಾರ್ಮಿಕರ ಚುನಾವಣೆಯ ಅಂಗವಾಗಿ ಹಟ್ಟಿ ಕ್ಯಾಂಪ್ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಟಿಯುಸಿಐ ಸಂಘಟನೆಯ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಹಟ್ಟಿ ಚಿನ್ನದ ಗಣಿಯಲ್ಲಿ ಜಾರಿಗೆ ತರುತ್ತಿರುವ ಗುತ್ತಿಗೆ ಪದ್ದತಿಯಿಂದ ಗಣಿ ಅಪಾಯದ ಅಂಚಿನಲ್ಲಿದೆ. ಆತಂಕಕಾರಿ ಸನ್ನಿವೇಶಗಳು ನಿರ್ಮಾಣವಾಗುತ್ತಿವೆ. ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಚುನಾವಣೆಯಲ್ಲಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ(ಟಿಯುಸಿಐ) ಸೈಕಲ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಕ್ರಮೇಣವಾಗಿ ಕಂಪೆನಿಯಲ್ಲಿ ಕಾರ್ಮಿಕರ ಸಂಖ್ಯೆ ಕಡಿಮೇ ಮಾಡಲಾಗುತ್ತಿದೆ. ಅಧಿಕಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಧಿಕಾರಿಗಳು, ಸರ್ಕಾರ ಮತ್ತು ಈ ಹಿಂದೆ ಇದ್ದ ಕಾರ್ಮಿಕ ಸಂಘದ ಪಧಾಧಿಕಾರಿಗಳ ಗಣಿಯನ್ನು ಖಾಸಗೀಯವರಿಗೆ ಗುತ್ತಿಗೆ ಕೊಡಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ಆರೋಪಿಸಿದರು.
ಗಣಿಯಲ್ಲಿ ಸುರಕ್ಷ ಕ್ರಮಗಳು ಕೈಗೊಳ್ಳದ ಕಾರಣ ಅಪಘಾತಗಳು ಸಂಭವಿಸುತ್ತಿವೆ. ಅಮಾಯಕ ಕಾರ್ಮಿಕರ ಜೀವ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ 104 ಅಪಘಾತಗಳು ಗಣಿಯಲ್ಲಿ ಸಂಭವಿಸಿವೆ. ಆದರೆ ಇಲ್ಲಿವರೆಗೆ ಯಾವಯೊಂದು ಸುರಕ್ಷಾ ಅಧಿಕಾರಿಗೆ ವಿರುದ್ಧ ಕ್ರಮಜರುಗಿಸಿಲ್ಲ ಎಂದು ಆರೋಪಿಸಿದರು.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಫರ್ಧಿಸಿದ್ದ ಎಂ.ಡಿ. ಅಮೀರ್ ಅಲಿ, ಮುಖಂಡರಾದ ಗಂಗಾಧರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಿನ್ನಪ್ಪ ಕೊಟ್ರಕಿ ನಿರೂಪಿಸಿದರು. ಚುನಾವಣೆಯಲ್ಲಿ ವಿವಿಧಸ್ಥಾನಗಳಿಗೆ ಸ್ಪರ್ಧಿಸಿದ್ದ ಅಭ್ಯರ್ಥಗಳಾದ ರೇವಣ ಸಿದ್ದಪ್ಪ ಚೈನುದ್ದೀನ್ ನಾಗೇಶ್ವರರಾವ್‍ದೇವಪ್ರಸಾದ ಬಾಬು, ನರಸಿಂಗರಾಯ, ಹಾಗೂ ಮಹಿಳಾ ಅಭ್ಯರ್ಥಿ ಬಸಮ್ಮ ಸೇರಿದಂತೆ ಇತರರು ಇದ್ದರು