×
Ad

ರಾಯಚೂರು ಅಂಚೆ ಕಚೇರಿಗಳ ಸೇವಾ ಅವಧಿ ವಿಸ್ತರಣೆ : ಯುಪಿಐ–ಫೋನ್‌ಪೇ ಡಿಜಿಟಲ್ ಪಾವತಿ ಜಾರಿ

Update: 2026-01-22 22:26 IST

ರಾಯಚೂರು: ಗ್ರಾಹಕರ ಅನುಕೂಲಕ್ಕಾಗಿ ರಾಯಚೂರಿನ ಮುಖ್ಯ ಅಂಚೆ ಕಚೇರಿಯಲ್ಲಿ ರಾತ್ರಿ 8 ಗಂಟೆವರೆಗೆ ಹಾಗೂ ಜಿಲ್ಲೆಯ ಸಿಂಧನೂರು, ಮಾನ್ವಿ, ಮಸ್ಕಿ, ಸಿರವಾರ, ಲಿಂಗಸುಗೂರು, ದೇವದುರ್ಗ ಮತ್ತು ಮುದಗಲ್ ಅಂಚೆ ಕಚೇರಿಗಳಲ್ಲಿ ಸಂಜೆ 5 ಗಂಟೆವರೆಗೆ ಸೇವಾ ಅವಧಿಯನ್ನು ವಿಸ್ತರಿಸಲಾಗಿದೆ.

ಈ ವ್ಯವಸ್ಥೆಯಡಿ ಗ್ರಾಹಕರು ನಗದು ಬಳಕೆ ಮಾಡದೇ, ಸುಲಭ ಹಾಗೂ ಸುರಕ್ಷಿತವಾಗಿ ಸ್ಪೀಡ್ ಪೋಸ್ಟ್, ನೋಂದಾಯಿತ ಅಂಚೆ, ಪಾರ್ಸೆಲ್, ಅಂತಾರಾಷ್ಟ್ರೀಯ ಅಂಚೆ ಸೇವೆಗಳು ಸೇರಿದಂತೆ ಎಲ್ಲಾ ರೀತಿಯ ಜವಾಬ್ದಾರಿಯುತ ಲೇಖನಗಳ ಬುಕ್ಕಿಂಗ್ ಶುಲ್ಕವನ್ನು ಡಿಜಿಟಲ್ ಪಾವತಿ ಮೂಲಕ ಪಾವತಿಸಬಹುದಾಗಿದೆ.

ನೂತನ ವ್ಯವಸ್ಥೆಯ ಮೂಲಕ ಗ್ರಾಹಕರು ತಮ್ಮ ಮೊಬೈಲ್ ಫೋನ್‌ನಲ್ಲಿರುವ ಯುಪಿಐ, ಫೋನ್‌ಪೇ ಸೇರಿದಂತೆ ಇತರೆ ಡಿಜಿಟಲ್ ಪಾವತಿ ಅಪ್ಲಿಕೇಶನ್‌ಗಳನ್ನು ಬಳಸಿ ಸ್ಕ್ಯಾನ್ ಮಾಡಿ ಅಥವಾ ಟ್ಯಾಪ್ ಮಾಡಿ ಕ್ಷಣಾರ್ಧದಲ್ಲಿ ಪಾವತಿ ಮಾಡುವ ಸೌಲಭ್ಯವನ್ನು ಪಡೆಯಬಹುದು.

ಸಾರ್ವಜನಿಕರ ಅನುಕೂಲಕ್ಕಾಗಿ ಭಾರತೀಯ ಪೋಸ್ಟ್ ರಾಯಚೂರು ವಿಭಾಗದ ವ್ಯಾಪ್ತಿಯಲ್ಲಿನ ಎಲ್ಲಾ ಅಂಚೆ ಕಚೇರಿಗಳಲ್ಲಿ ಯುಪಿಐ ಹಾಗೂ ಫೋನ್‌ಪೇ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.

ಡಿಜಿಟಲ್ ಇಂಡಿಯಾ ಅಭಿಯಾನದ ಅಂಗವಾಗಿ ಗ್ರಾಹಕ ಸ್ನೇಹಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಅಂಚೆ ಇಲಾಖೆಯ ಗರಿಷ್ಠ ಸೇವೆಗಳನ್ನು ಬಳಸಿಕೊಳ್ಳುವಂತೆ ರಾಯಚೂರು ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News