×
Ad

ದೇವರಾಜು ಅರಸರ ತಪ್ಪು ನಿರ್ಧಾರದಿಂದ ದಲಿತರಿಗೆ ಅನ್ಯಾಯ: ವಸಂತಕುಮಾರ ಆರೋಪ

Update: 2025-05-08 19:40 IST

ರಾಯಚೂರು: ಹಾವನೂರು ವರದಿಯ ಹಿನ್ನೆಲೆಯಲ್ಲಿ ಎಸ್ ಸಿ ಪಟ್ಟಿಯಲ್ಲಿ ಇರದ ಜಾತಿಗಳು‌ ಪರಿಶಿಷ್ಟ ಜಾತಿಗೆ ಸೇರಿಸಿದ್ದು, ಇದರಿಂದ ದಲಿತರಿಗೆ ಬಹಳ ಅನ್ಯಾಯವಾಗಿದೆ. ದೇವರಾಜು ಅರಸು ಅವರ ತಪ್ಪು ನಿರ್ಧಾರದಿಂದ‌ ಸಮಾಜ ಬೆಲೆ ತೆರಬೇಕಾಯಿತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ,‌ ವಿಧಾನಪರಿಷತ್ ಸದಸ್ಯ ಎ ವಸಂತಕುಮಾರ ಆರೋಪಿಸಿದರು.

ಅವರಿಂದು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಛಲವಾದಿ ನಾರಾಯಣ ಸ್ವಾಮಿ ಅವರ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಇತಿಹಾಸದಲ್ಲಿ ಕೆಲವು ತಪ್ಪು ಮಾಡಿದೆ. ಇದನ್ನೂ ಎಲ್ಲರೋ ಒಪ್ಪಬೇಕು, ನಾಯಕರ ಕೆಲ ತಪ್ಪು ನಿರ್ಣಯಗಳಿಂದ ಪಕ್ಷಕ್ಕೆ ಹಾಗೂ ಕೆಲ ಸಮುದಾಯಗಳಿಗೆ ಅನ್ಯಾಯವಾಗಿದೆ. ಅದೇ ರೀತಿ ದೇವರಾಜು ಅರಸು ಅವರಿಂದಲೂ ತಪ್ಪಾಗಿದೆ. ಆದರೂ ಅವರ ಮೇಲಿನ‌ ನಂಬಿಕೆ, ವಿಶ್ವಾಸದಿಂದ ಬೇರೆಯವರು ಪ್ರಶ್ನೆ ಮಾಡಲಿಲ್ಲ. ಅಂಬೇಡ್ಕರ್ ಅವರ ಸಮಾದಿಗೆ ಜಾಗ ನೀಡದೇ ಅನ್ಯಾಯ ಮಾಡಿತ್ತು, ನಮ್ಮಿಂದ ದೊಡ್ಡ ತಪ್ಪಾಗಿದೆ ಎಂದು ಸದನದಲ್ಲಿ ರಮೇಶ ಕುಮಾರ ಮಾತನಾಡಿದ್ದರು, ಇದು ತಪ್ಪಾದ ಹೇಳಿಕೆ, ಅದನ್ನು ಬಳಿಕ ಅನೇಕ ನಾಯಕರು ವಿರೋಧ ಮಾಡಿದ್ದಾರೆ. ನಮ್ಮ ಪಕ್ಷದಲ್ಲಿ ಅನೇಕ ಬಾರಿ ಕೆಲ ನಾಯಕರು ನೀಡಿದ ಹೇಳಿಕೆಯಿಂದ ಪಕ್ಷಕ್ಕೆ‌ ನಷ್ಠವಾಗಿದೆ ಹಾಗಂತ ಅದು ಪಕ್ಷದ ನಿಲುವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News