×
Ad

ಪತ್ರಕರ್ತ ಸೈಯದ್ ನಯೀಮ್ ಅಶ್ರಫ್ ನಿಧನ

Update: 2026-01-17 14:08 IST

ರಾಯಚೂರು: ನಗರದ ಪ್ರಸಿದ್ಧ ದರ್ಗಾ ಹಜರತ್ ಸೈಯದ್ ಶಂಸ್‌ ಆಲಂ ಹುಸೇನಿ (ರಹಮತುಲ್ಲಾ ಅಲೈಹಿ) ಅವರ ಕುಟುಂಬದ ಪ್ರಮುಖರು ಹಾಗೂ ಪತ್ರಕರ್ತರಾಗಿದ್ದ ಸೈಯದ್ ನಯೀಮ್ ಅಶ್ರಫ್ ಹುಸೇನಿ (48) ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನರಾದರು.

ವೃತ್ತಿಯಲ್ಲಿ ಪತ್ರಕರ್ತರಾಗಿದ್ದ ಅವರು ಹಲವು ಸುದ್ದಿವಾಹಿನಿಗಳು ಹಾಗೂ ಉರ್ದು ದಿನಪತ್ರಿಕೆಗಳಿಗೆ ಸೇವೆ ಸಲ್ಲಿಸಿ, ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿದ್ದರು.

ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ಸಹೋದರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಅವರ ಅಂತ್ಯಕ್ರಿಯೆಯು ಇಂದು ಸಂಜೆ 6.30ಕ್ಕೆ ‌ ಸೈಯದ್ ಶಂಸ್‌ ಆಲಂ ಹುಸೇನಿ ಖಬರ್ ಸ್ಥಾನದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News