ಮಾನ್ವಿ | ತುಂಗಭದ್ರಾ ನದಿಯಲ್ಲಿ ಮುಳುಗಿ ಯುವಕ ಮೃತ್ಯು
Update: 2026-01-15 22:47 IST
ಸಾಂದರ್ಭಿಕ ಚಿತ್ರ
ಮಾನ್ವಿ : ತಾಲ್ಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಪುಣ್ಯಸ್ನಾನಕ್ಕಾಗಿ ತುಂಗಭದ್ರಾ ನದಿಗೆ ಇಳಿದಿದ್ದ ಯುವಕ ಮೃತಪಟ್ಟಿದ್ದಾರೆ ಘಟನೆ ಗುರುವಾರ ಸಂಭವಿಸಿದೆ.
ಮೃತ ಯುವಕನನ್ನು ಮಾನ್ವಿ ಪಟ್ಟಣದ ವಂಶಿ ರೆಡ್ಡಿ ಸುರೇಂದ್ರ ರೆಡ್ಡಿ ರಾಜಲದಿನ್ನಿ (18) ಎಂದು ಗುರುತಿಸಲಾಗಿದೆ.
ಯುವಕ ವಂಶಿ ರೆಡ್ಡಿ ಸ್ನಾನಕ್ಕಾಗಿ ನೀರಿಗೆ ಇಳಿದಾಗ ಮುಳುಗಿ ಮೃತಪಟ್ಟಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿಷಯ ತಿಳಿಯುತ್ತಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಯುವಕನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.