ರಾಯಚೂರು: ಪತ್ರಕರ್ತರ ಸಂಘದ ಚುನಾವಣೆಗೆ ಉಮೇದುವಾರಿಕೆ ಸಲ್ಲಿಕೆ
Update: 2025-10-19 20:36 IST
ರಾಯಚೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ 2025-28ರ ಅವಧಿಗೆ ನಡೆಯುವ ಚುನಾವಣೆಗೆ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಹಿರಿಯ ಪತ್ರಕರ್ತ ಬಸವರಾಜ ಭೋಗಾವತಿ ಹಾಗೂ ಜಿಲ್ಲಾ ಸಮಿತಿ ಸದಸ್ಯ ಸ್ಥಾನಕ್ಕೆ ರಾಯಚೂರು ಧ್ವನಿ ಪತ್ರಿಕೆ ಸಂಪಾದಕ ಲಕ್ಷ್ಮಣರಾವ್ ಕಪಗಲ್ ಉಮೇದುವಾರಿಕೆ ಸಲ್ಲಿಸಿದರು.
ಇಬ್ಬರು ಪ್ರತ್ಯೇಕವಾಗಿ ರವಿವಾರ ಚುನಾವಣಾಧಿಕಾರಿ ಮಲ್ಲಣ್ಣ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಪಿ. ಪರಮೇಶ, ಹನುಮಂತಪ್ಪ ಕೊಟ್ನೆಕಲ್, ಮಾರೆಪ್ಪ ದೊಡ್ಡಮನಿ, ಲಕ್ಷ್ಮಣ ಕಪಗಲ್, ತುಂಗಬಿಂಬ ಪತ್ರಿಕೆಯ ಸಂಪಾದಕರಾದ ಗುರುಗೌಡ, ಕಲ್ಯಾಣ ಸಂಜೆ ಪ್ರಧಾನ ಸಂಪಾದಕರಾದ ಈಶಪ್ಪ ಬೈಲ್ ಮರ್ಚೆಡ್, ನಮ್ಮ ನೆಲ ಸಂಪಾದಕರಾದ ಪ್ರಭಕಾರ ಹುಡೇದ್, ಪತ್ರಕರ್ತರಾದ ಅಶೋಕ ತಡಕಲ್, ದೇವಪ್ಪ ಬ್ಯಾಗವಾಟ, ವಾಗೇಶ ಪಾಟೀಲ್, ಹನುಮಂತರಾಯ ಕಪಗಲ್, ಶಿವಕುಮಾರ ಬಿ, ಸೇರಿದಂತೆ ಅನೇಕರು ಇದ್ದರು. ಸಹಾಯಕ ಚುನಾವಣಾಧಿಕಾರಿ ಸುರೇಶ ರೆಡ್ಡಿ ಉಪಸ್ಥಿತರಿದ್ದರು.