×
Ad

ರಾಯಚೂರು ಜಿಲ್ಲಾದ್ಯಂತ ವಿವಿಧೆಡೆ ಮಿಂಚಿನ ಮತದಾರ ನೋಂದಣಿ ಅಭಿಯಾನ

Update: 2025-10-27 17:49 IST

ರಾಯಚೂರು : ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ- 2026ರ ಮತದಾರರ ವಿಶೇಷ ನೋಂದಣಿ ಅಭಿಯಾನವು ರಾಯಚೂರು ಸೇರಿದಂತೆ ಸಿಂಧನೂರ, ಮಾನವಿ, ಮಸ್ಕಿ, ಲಿಂಗಸೂರ, ದೇವದುರ್ಗ, ಸಿರವಾರ ಸೇರಿದಂತೆ ವಿವಿಧೆಡೆ ಅ.27ರಂದು ಯಶಸ್ವಿಯಾಗಿ ನಡೆಯಿತು.

ಮಾನ್ವಿಯ ಕಾಕತೀಯ ಪ್ರೌಢಶಾಲೆ, ಸಿಂಧನೂರಿನ ಆದರ್ಶ ವಿದ್ಯಾಲಯ, ಲಿಂಗಸುಗೂರು ತಾಲೂಕು ಪಂಚಾಯತ್, ಮಸ್ಕಿ ಕೇಂದ್ರ ಶಾಲೆ, ಸಿರವಾರದ ಶ್ರೀ ಬಸವ ಪದವಿ ಪೂರ್ವ ಕಾಲೇಜು, ದೇವದುರ್ಗದ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಮಟ್ಟದ ಸ್ವೀಪ್ ಸಮಿತಿಯಿಂದ ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನ ನಡೆಯಿತು.

ಲಿಂಗಸುಗೂರು ತಾಲೂಕು:

ಮತದಾರರ ಪಟ್ಟಿ ತಯಾರಿಕೆ ಕುರಿತಂತೆ ಮಿಂಚಿನ ನೋಂದಣಿ ಅಭಿಯಾನ ಅಂಗವಾಗಿ ಲಿಂಗಸುಗೂರು ತಹಶೀಲ್ದಾರ್ ಸತ್ಯಮ್ಮ ಅವರು ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ನಮೂನೆ-19 ಅರ್ಜಿಗಳನ್ನು ಸ್ವೀಕರಿಸಿದರು.

ದೇವದುರ್ಗ ತಾಲೂಕು :

ದೇವದುರ್ಗ ತಹಶೀಲ್ದಾರ ಕಾರ್ಯಾಲಯದಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ವಿಶೇಷ ನೋಂದಣಿ ಅಭಿಯಾನ ನಡೆಯಿತು.

ಮಾನ್ವಿ ತಾಲೂಕು :

ಕಾಕತೀಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ತಹಶೀಲ್ದಾರರು ಹಾಗೂ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಮತದಾರ ನೋಂದಣಿ ಕಾರ್ಯಕ್ರಮ ನಡೆಯಿತು. ಮಾನ್ವಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಸರ್ಕಾರಿ ಪ್ರೌಢಶಾಲೆಗಳ ಶಿಕ್ಷಕರು ನೋಂದಣಿ ಮಾಡಿಸಿದರು.

ಅರಕೇರಾ ತಾಲೂಕು :

ಅರಕೇರಾ ತಾಲೂಕಿನ ತಹಶೀಲ್ದಾರ್‌ ಅಮರೇಶ್ ಬಿರಾದಾರ ಅವರ ನೇತೃತ್ವದಲ್ಲಿ ವಿಶೇಷ ಮಿಂಚಿನ ನೋಂದಣಿ ಅಭಿಯಾನ ಅರಕೇರಾದಲ್ಲಿ ನಡೆಯಿತು. ಬಿಇಓ ಶಿವರಾಜ್ ಪೂಜಾರಿ, ಅಧಿಕಾರಿಗಳಾದ ಬಸವರಾಜ್ ಕಟ್ಟಿಮನಿ, ಸುಂಕದ್, ಶಿವಜಾತಪ್ಪ, ಅರುಣಕುಮಾರ್ ಹಾಗೂ ಇನ್ನೀತರರು ಇದ್ದರು.

ಉಡಮಗಲ್ ಖಾನಾಪುರ ಪ್ರೌಢಶಾಲೆ :

ಮತದಾರರ ವಿಶೇಷ ಮಿಂಚಿನ ನೋಂದಣಿ ಅಭಿಯಾನದಡಿ ರಾಯಚೂರು ತಾಲೂಕಿನ ಉಡಮಗಲ್ ಖಾನಾಪುರದ ಸರ್ಕಾರಿ ಪ್ರೌಢಶಾಲೆಯ ಎಲ್ಲ ಶಿಕ್ಷಕರು ಫಾರ್ಮ್ 19 ಭರ್ತಿ ಮಾಡಿ ಶಾಲೆಯ ಮುಖ್ಯಗುರುಗಳಾದ ವಿರೇಶ್ ಅಂಗಡಿ ಅವರಿಗೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News