×
Ad

ಮಸ್ಕಿ | ಹಾಲಾಪೂರ ಗ್ರಾಪಂ ವಿಭಜನೆಗೆ ಒತ್ತಾಯ : ಬೇಡಿಕೆ ಈಡೇರಿಸದಿದ್ದರೆ ಚುನಾವಣೆ ಬಹಿಷ್ಕಾರ ಎಚ್ಚರಿಕೆ

Update: 2025-12-25 16:47 IST

ಮಸ್ಕಿ : ಮಸ್ಕಿ ತಾಲ್ಲೂಕಿನ ಹಾಲಾಪೂರ ಗ್ರಾಮ ಪಂಚಾಯತಿ ಬಹುದೊಡ್ಡ ಗ್ರಾಪಂ ಆಗಿದ್ದು, ಸಾರ್ವಜನಿಕರಿಗೆ ಹಲವು ರೀತಿಯ ತೊಂದರೆ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

26 ಸದಸ್ಯರನ್ನು ಹೊಂದಿರುವ ಈ ಪಂಚಾಯತಿ 16 ಗ್ರಾಮಗಳು ಹಾಗೂ ಕ್ಯಾಂಪುಗಳನ್ನು ಒಳಗೊಂಡಿದ್ದು, ಅಂದಾಜು 18 ಸಾವಿರ ಜನಸಂಖ್ಯೆ ಹೊಂದಿದೆ. ಭೌಗೋಳಿಕವಾಗಿ ವ್ಯಾಪಕವಾಗಿರುವ ಕಾರಣ ಪಂಚಾಯತಿ ವ್ಯಾಪ್ತಿಯ ಕೆಲ ಗ್ರಾಮಗಳಿಗೆ ಬಸ್ ಸೌಲಭ್ಯವೂ ಇಲ್ಲದ ಸ್ಥಿತಿ ಇದೆ.

ತುಗ್ಗಲದಿನ್ನಿ, ಶಂಕರನಗರ ಕ್ಯಾಂಪ್, ಹಿರೇಕಡಬೂರು, ಹಂಚಿನಾಳ, ಎಸ್.ರಾಮಲದಿನ್ನಿ ಗ್ರಾಮಗಳು ಪಂಚಾಯತಿಯಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿದ್ದು, ಗ್ರಾಮಸ್ಥರಿಗೆ ಸಮಯಕ್ಕೆ ಸರಿಯಾಗಿ ಪಂಚಾಯತಿಗೆ ಬರಲು ಸಾಧ್ಯವಾಗುತ್ತಿಲ್ಲ. ಇದರಿಂದ ಪಂಚಾಯತಿ ಕೆಲಸಕಾರ್ಯಗಳಿಗೆ ಸಾಕಷ್ಟು ಅಡಚಣೆ ಉಂಟಾಗಿದೆ.

ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಲಾಪೂರ ಗ್ರಾಮ ಪಂಚಾಯತಿಯನ್ನು ವಿಭಜಿಸಿ ಹೊಸ ಗ್ರಾಮ ಪಂಚಾಯತಿ ರಚಿಸಬೇಕೆಂದು ಒತ್ತಾಯಿಸಿ, ಈ ಬೇಡಿಕೆಯನ್ನು ಈಡೇರಿಸದಿದ್ದರೆ ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಗ್ರಾಮ ಪಂಚಾಯತಿ ಪಿಡಿಒ ವಿಶ್ವನಾಥ ಹೂಗಾರ, ತಾಲ್ಲೂಕು ಪಂಚಾಯತಿ ಇಒ ಅಮರೇಶ ಯಾದವ, ಮಾನ್ಯ ತಹಶೀಲ್ದಾರರು ಹಾಗೂ ಶಾಸಕರ ಆಪ್ತ ಕಾರ್ಯದರ್ಶಿ ಶರಣೆಗೌಡ ಅವರಿಗೆ ಪಂಚಾಯತಿ ವ್ಯಾಪ್ತಿಯ ಮುಖಂಡರು, ನಾಗರಿಕರು ಹಾಗೂ ಗ್ರಾಪಂ ಸದಸ್ಯರು ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಗದೀಶ ತಾತ, ಕರಿಯಪ್ಪ ಬಿ, ಎರಿತಾತ, ಬಸಪ್ಪ ಜಂಗಮರಹಳ್ಳಿ, ಬಸವರಾಜ, ರವಿ ದೇಸಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News