×
Ad

ರಾಯಚೂರು | ಅಲ್ಲಮ ಪ್ರಭು ಕಾಲೋನಿ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ

Update: 2025-03-02 12:19 IST

ರಾಯಚೂರು : ನಗರದ ಅಲ್ಲಮ ಪ್ರಭು ಕಾಲೋನಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದರಲ್ಲಿ 6ನೇ ತರಗತಿಯಿಂದ 7ನೇ ತರಗತಿ ವಿದ್ಯಾರ್ಥಿಗಳು ತಾವೇ ಸ್ವತಃ ತಯಾರಿಸಿದಂತಹ ನೀರಿನಿಂದ ವಿದ್ಯುತ್ ತಯಾರಿಕೆ, ಪರಿಸದ ಮಾಲಿನ್ಯ ತಡೆ, ಉಪಗ್ರಹ ಉಡಾವಣೆಯ ವಿವಿಧ ವಿಜ್ಞಾನ ಚಿತ್ರಗಳನ್ನು ಪ್ರದರ್ಶಿಸಿದರು.

ಇದೇ ವೇಳೆ ಶಾಲೆಯ ಮುಖ್ಯ ಗುರುಗಳಾದ ಸುಜಾತ ಅವರು ಮಾತನಾಡಿ, ಇಂದು ವಿಜ್ಞಾನ ದಿನಾಚರಣೆ ಅಂಗವಾಗಿ ನಮ್ಮ ಶಾಲೆಯಲ್ಲಿ ಮಕ್ಕಳಿಗೆ ವಿಜ್ಞಾನದ ಬಗ್ಗೆ ಪ್ರದರ್ಶನ ಏರ್ಪಡಿಸಿದ್ದೇವೆ. ಒಂದು ಮನೆ ಕಟ್ಟಲು ಬುನಾದಿ ಹೇಗೆ ಮುಖ್ಯವೋ ಅದೇ ರೀತಿ ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಮತ್ತು ವಿಜ್ಞಾನದ ವಿಷಯಗಳು, ಪರಿಸರ, ತಂತ್ರಜ್ಞಾನ ಆಸಕ್ತಿ ಬರುವ ರೀತಿಯಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಸ್.ಚಂದ್ರು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರದರ್ಶನ ವೀಕ್ಷಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News