×
Ad

ದೇವದುರ್ಗ| ದನದ ಕರುವನ್ನು ತಿಂದು ಹಾಕಿದ ಚಿರತೆ; ಗ್ರಾಮಸ್ಥರಲ್ಲಿ ಆತಂಕ

Update: 2025-12-15 18:40 IST

ದೇವದುರ್ಗ : ತಾಲೂಕಿನ ಸುಲಗುಡ್ಡ ಸೀಮಾದ ಮಂಡಲಗುಡ್ಡ ಮಲ್ಲಪ್ಪ ಅವರ ಹೊಲದಲ್ಲಿ 3 ವರ್ಷದ ದನದ ಕರುವನ್ನು ಚಿರತೆ ತಿಂದು ಹಾಕಿದ ಘಟನೆ ವರದಿಯಾಗಿದೆ.

ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳಾದ ಅಲಿಮುದ್ದಿನ್ ನೇತೃತ್ವದ ತಂಡ ಧಾವಿಸಿ ಪರೀಶೀಲನೆ ನಡೆಸಿ ಚಿರತೆಯ ಚಲನವಲನದ ಗುರುತುಗಳ ಪತ್ತೆ ಹಚ್ಚಲು ಮುಂದಾಗಿದ್ದಾರೆ.

ದನದ ಕರುವಿನ ಸಾವಿನಿಂದ ಆದ ಹಾನಿಗೆ ಪರಿಹಾರ ನೀಡಲು ಪರಿಶೀಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿರತೆ ದಾಳಿಯಿಂದಾಗಿ ಈ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಚಿರತೆ ಸೆರೆ ಹಿಡಿಯಲು‌ ಬೋನು ಹಾಕಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅತಂಕ ಪಡುವ ಅಗತ್ಯವಿಲ್ಲ, ಆದರೆ‌ ಜಾಗೃತ ರಾಗಿ‌ರಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಪಶುವೈದ್ಯಾದಿಕಾರಿ ರವಿಶಂಕರ್ ಜಾಲಹಳ್ಳಿ, ಬವರಾಜ್ ಬರಮಗೌಡರ್  ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News