×
Ad

ರಾಯಚೂರು | ಆಪರೇಷನ್ ಸಿಂಧೂರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಬಿಎಸ್‍ಎಫ್‍ಯೋಧ ಎಂ.ದಿವಾಕರ ಅವರಿಗೆ ಸನ್ಮಾನ ಸಮಾರಂಭ

Update: 2025-10-26 22:18 IST

ರಾಯಚೂರು: ಆಪರೇಷನ್ ಸಿಂಧೂರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಬಂಡೆಗುಡ್ಡ ಗ್ರಾಮದವರಾದ ಬಿಎಸ್‍ಎಫ್‍ನ ಎಎಸ್‍ಐ ಎಂ.ದಿವಾಕರ ಅವರನ್ನು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ನಗರದ ಸರ್ಕಾರಿ ನೌಕರರ ಭವನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಬಿಎಸ್‍ಎಫ್‍ನ ಎಎಸ್‍ಐ ಎಂ.ದಿವಾಕರ ಅವರು ಮೇ 7ರಿಂದ 10ರವೆರೆಗೆ ಬಡೆದ ಆಪರೇಷನ್ ಸಿಂಧೂರು ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ಅವರಿಗೆ ಕೇಂದ್ರೀಯ ಗಡಿ ಭದ್ರತಾ(ಬಿಎಸ್‍ಎಫ್) ಇಲಾಖೆಯಿಂದ ಪ್ರಶಸ್ತಿ ಪ್ರಮಾಣ ಪತ್ರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲೆಯ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಲಾಯಿತು.

ರಾಯಚೂರು ಜಿಲ್ಲೆಯ ಮೂಲದವರಾದ ಬಿಎಸ್‍ಎಫ್‍ನ ಎಎಸ್‍ಐ ಎಂ ದಿವಾಕರ್ ಅವರ ಶೌರ್ಯ ಸಾಹಸ, ಕರ್ತವ್ಯ ನಿಷ್ಠೆ ಕಾರ್ಯಾಚರಣೆಯಲ್ಲಿ ಪ್ರದರ್ಶನ ಮಾಡಿ ಭಾರತ ಮಾತೆಯ ರಕ್ಷಣೆ ಮಾಡಿ ದೇಶದ, ಕರ್ನಾಟಕ ರಾಜ್ಯದ, ಹಾಗೂ ರಾಯಚೂರು ಜಿಲ್ಲೆಯ ಗೌರವ ಘನತೆ ಹೆಚ್ಚಿಸಿದ್ದಾರೆ ಎಂದು ಸಂಘ ಪದಾಧಿಕಾರಿಗಳು ಹೇಳಿದರು.

ಸಂಘದ ಗೌರವಾಧ್ಯಕ್ಷ ಎಸ್.ಮಲ್ಲಯ್ಯ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷರಾದ ಬಸವರಾಜ ಮುಷ್ಠೂರು, ಬಸವರಾಜ ವಾಲಿ, ಶರಣಬಸವ, ಪ್ರಧಾನ ಕಾರ್ಯದರ್ಶಿ ಆಂಜನೇಯ ಜಲ್ಲಿ, ಖಜಾಂಚಿ ಎಂ.ಡಿ ಸಲೀಮ್ ಹಾಗೂ ಪದಾಧಿಕಾರಿಗಳು ಮಾಜಿ ಯೋಧರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News