×
Ad

ರಾಯಚೂರು | ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ಮುಂದುವರಿಸಲು ಆಗ್ರಹಿಸಿ ಎಐಡಿಎಸ್ಒ ವತಿಯಿಂದ ಪ್ರತಿಭಟನೆ

Update: 2025-07-04 16:57 IST

ರಾಯಚೂರು : ಇಲ್ಲಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ಮುಂದುವರಿಸಲು ಆಗ್ರಹಿಸಿ  ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ರಾಯಚೂರಿನ ವಿಭಾಗಿಯ ಸಂಚಾರಿ ಅಧಿಕಾರಿಗಳ‌ ಕಚೇರಿ‌ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ವೇಳೆ  ಎ.ಐ.ಡಿ.ಎಸ್.ಓ ನ ಅಧ್ಯಕ್ಷರಾದ ಹಯ್ಯಾಳಪ್ಪ ಅವರು ಮಾತನಾಡಿ, ʼವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅಕ್ಟೋಬರ್ ನಲ್ಲಿ ಬಸ್ ಪಾಸ್ ನ್ನು ವಿತರಣೆ ಮಾಡಲಾಗಿತ್ತು. ಜೂನ್ ಅಂತ್ಯಕ್ಕೆ ಬಸ್ ಪಾಸ್ ಮುಕ್ತಾಯಗೊಂಡಿದ್ದು, ಕೇವಲ ಏಳು ತಿಂಗಳುಗಳಲ್ಲಿ ವಾರ್ಷಿಕ ಬಸ್ ಪಾಸ್ ಮುಕ್ತಾಯವಾಗಿದೆ. ಆದರೆ ಶೈಕ್ಷಣಿಕ ವರ್ಷ ಮುಗಿಯಲು ಇನ್ನು ಎರಡು ತಿಂಗಳು ಬಾಕಿ ಇರುವ ಕಾರಣ ಪ್ರತಿನಿತ್ಯ 60-100/- ಅಷ್ಟು ಹಣವನ್ನು ಬಸ್ ಟಿಕೆಟ್ ದರಕ್ಕಾಗಿ ಖರ್ಚು ಮಾಡಿ ವಿದ್ಯಾರ್ಥಿಗಳು ಪ್ರಯಾಣ ಮಾಡುವಂತಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಬಹಳ ಕಷ್ಟವಾಗುತ್ತಿದ್ದು ಆಗಸ್ಟ್ ತಿಂಗಳವರೆಗೂ ವಿದ್ಯಾರ್ಥಿ ಬಸ್ ಪಾಸ್ ಅವಧಿಯನ್ನು ಮುಂದುವರಿಸಬೇಕುʼ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಯಲ್ಲಪ್ಪ, ಷಹಬಾಜ್, ಉದಯ್, ಬಾಬು, ಶಿವಾಜಿ , ನವೀನ್, ವಿನೋದ್ ಭಾಗವಹಿಸಿದ್ದರು .

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News