ಸಿಂಧನೂರು | ಗ್ರಾಮ ಪಂಚಾಯತ್‌ನಿಂದ ಪ್ರತಿ ಗುರುವಾರ ಕರ ವಸೂಲಿ ಅಭಿಯಾನ
ಸಿಂಧನೂರು : ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ವ್ಯಾಪಾರ, ಸೇವೆಗಳು, ಆಸ್ತಿಗಳ ಮೇಲಿನ ಶುಲ್ಕಗಳನ್ನು ಸಮರ್ಪಕವಾಗಿ ವಸೂಲಿ ಮಾಡುವುದರಿಂದ ಪಂಚಾಯತ್‌ಗಳ ಸ್ವಂತ ಸಂಪನ್ಮೂಲಗಳು ಬಲಪಡಿಸಿ, ಮೂಲಸೌಕರ್ಯ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ತಾಲ್ಲೂಕು ಪಂಚಾಯತ್ ಇಓ ಚಂದ್ರಶೇಖರ ಹೇಳಿದರು.
ತಾಲೂಕಿನ ಉಮಲೂಟಿ ಗ್ರಾಮ ಪಂಚಾಯಿತಿಗೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು ಚಂದ್ರಶೇಖರ್ ಪಂಚಾಯತ್ ಸಿಬ್ಬಂದಿಯೊಂದಿಗೆ ಮನೆ-ಮನೆಗೆ ಭೇಟಿ ನೀಡಿ ಕರ ವಸೂಲಿ ಅಭಿಯಾನದಲ್ಲಿ ಪಾಲ್ಗೊಂಡು ಕರವಸೂಲಿ ಮಾಡಿದರು.
ನಂತರ ಮಾತನಾಡಿದ ಅವರು, ಸಿಂಧನೂರು ತಾಲೂಕಿನ ಗ್ರಾ.ಪಂ.ಗಳಲ್ಲಿ ಪ್ರತಿ ಗುರುವಾರ ಕರ ವಸೂಲಿ ಅಭಿಯಾನ ಹಮ್ಮಿಕೊಂಡಿದ್ದು, ಇಂದು ತಾಲೂಕಿನಲ್ಲಿ 16.2 ಲಕ್ಷ ರೂ.ಗಳ ಕರ ವಸೂಲಿ ಮಾಡಲಾಗಿದೆ. ಕರ್ನಾಟಕದ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಮತ್ತು ಕರಗಳ ಸಂಗ್ರಹಣೆಗೆ ನಡೆಸುವ ವಿಶೇಷ ಚಳವಳಿಯಾಗಿದೆ. ಇದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾರ್ಗದರ್ಶನದಲ್ಲಿ ನಡೆಯುತ್ತಿದೆ ಎಂದರು.
ಸಹಾಯಕ ನಿರ್ದೇಶಕ ಅಮರ ಗುಂಡಪ್ಪ ನೇತೃತ್ವದ ಇನ್ನೊಂದು ತಂಡ ಮಾಡಿಕೊಂಡು ರಾಗಲಪರ್ವಿ ಗ್ರಾ.ಪಂ.ಗೆ ಭೇಟಿ ನೀಡಿ ಕರವಸಲಿ ಮಾಡುವ ಸಿಬ್ಬಂದಿಯೊಂದಿಗೆ ಪಾಲ್ಗೊಂಡು ಕರ ವಸೂಲಿ ಮಾಡಿದರು.