×
Ad

ರಾಯಚೂರು | ಡಿ.20, 21ರಂದು ʼ11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನʼ : ಸುರೇಶ ಮಾಚನೂರು ಹಟ್ಟಿ

Update: 2025-12-18 20:40 IST

ರಾಯಚೂರು : "11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ರಾಯಚೂರು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಡಿ.20 ಹಾಗೂ 21ರಂದು ಹಮ್ಮಿಕೊಳ್ಳಲಾಗಿದ್ದು, ಸಮಾನ ಮನಸ್ಕರು, ಪ್ರಗತಿಪರರು, ಸಾಹಿತಿಗಳು ಬಂದು ಯಶಸ್ವಿಗೊಳಿಸಬೇಕು ಎಂದು ದಲಿತ ಸಾಹಿತ್ಯ ಪರಿಷತ್ತಿನ ಯುವ ಘಟಕ ಅಧ್ಯಕ್ಷ ಸುರೇಶ ಮಾಚನೂರು ತಿಳಿಸಿದರು.

ಲಿಂಗಸುಗುರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, "ಯಾದಗಿರಿಯ ಸಾಹಿತಿ ಡಾ.ಜಯದೇವಿ ಗಾಯಕವಾಡ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಮ್ಮೇಳನದಲ್ಲಿ ಸರ್ವರಿಗೂ 'ಸಂವಿಧಾನ ಮತ್ತು ಮೀಸಲಾತಿ ಒಳಗೆ ಮತ್ತು ಹೊರಗೆ' ಎಂಬ ವಿಷಯ ಕುರಿತು ಎರಡು ಸಂವಾದ ಗೋಷ್ಠಿ ಹಮ್ಮಿಕೊಳ್ಳಲಾಗಿದೆ'' ಎಂದರು.

ತಾಲೂಕಿನ DSS ಹಿರಿಯ ಹೋರಾಟಗಾರ ಭೀಮಣ್ಣ ನಗನೂರು BNR ರವರಿಗೆ 'ರಾಷ್ಟ್ರೀಯ ದಲಿತ ಚೇತನ ಪ್ರಶಸ್ತಿ' ಹಾಗೂ ಹಟ್ಟಿಯ ಜಾನಪದ ಕಲಾವಿದೆ ಬುರ್ರ ಕಥೆ ಕಮಲಮ್ಮ ಮತ್ತು ಯುವ ಕ್ರೀಡಾ ಪಟು ಜೀವನ ಕುಮಾರ ರಾಯಪ್ಪ ಮಗನಿಗೆ ಪ್ರಶಸ್ತಿ ಸನ್ಮಾನ ದೊರಕಿರುವುದು ಸಂತಸ ಸುದ್ದಿಯಾಗಿದೆ ಎಂದರು.

ಆದಕಾರಣ ನಾಡಿನ ಪ್ರತಿ ಜಿಲ್ಲಾ ಮತ್ತು ತಾಲೂಕಿನ ನಗರ ಪಟ್ಟಣ ಹಳ್ಳಿಯ ಸರ್ವರೂ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಕರೆ ನೀಡಲಾಯಿತು. ಈ ವೇಳೆ ಮಲ್ಲಿಕಾರ್ಜುನ ಕಡೇಚೂರು ದಾ.ಸ.ಪ ಖoಜಾಚಿ, ಭೀಮಣ್ಣ ನಗನೂರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News