×
Ad

ರಾಯಚೂರು | ಫೇಸ್ ಕ್ಯಾಪ್ಚರ್ ಪದ್ದತಿ ಕೈ ಬಿಡಲು ಒತ್ತಾಯಿಸಿ ಅಂಗನವಾಡಿ ನೌಕರರಿಂದ ಸಹಿ ಸಂಗ್ರಹ ಚಳವಳಿ

Update: 2025-08-26 19:28 IST

ರಾಯಚೂರು: ಕೇಂದ್ರ ಸರ್ಕಾರ ಜಾರಿಗೂಳಿಸಿದ ಫೇಸ್ ಕ್ಯಾಪ್ಚರ್ ಪದ್ದತಿ ಕೈ ಬಿಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ಇಂದು ಅಂಗನವಾಡಿ ನೌಕರರು ಸಹಿ ಸಂಗ್ರಹ ಚಳುವಳಿ ನಡೆಸಿದರು.

ಸಹಿ ಮಾಡಿದ ಅವುಗಳನ್ನು ನಗರದ ಕೇಂದ್ರ ಅಂಚೆ ಕಚೇರಿ ಮೂಲಕ ರಿಜಿಸ್ಟರ್ ಪೋಸ್ಟ್ ಕೇಂದ್ರ - ರಾಜ್ಯ ಸರ್ಕಾರಗಳಿಗೆ ಫೇಸ್ ಕ್ಯಾಪ್ಚರ್ ಪದ್ದತಿ ಕೈ ಬಿಡಲು ಒತ್ತಾಯಿಸಲಾಯಿತು.

ಈ ಸಹಿ ಸಂಗ್ರಹ ಚಳುವಳಿಯಲ್ಲಿ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಭಾಗವಹಿದ್ದರು. ಜಿಲ್ಲೆಯಾದ್ಯಂತ ಸುಮಾರು ರಾಯಚೂರು 1150, ದೇವದುರ್ಗ-1100, ಲಿಂಗಸೂಗೂರು -1000 ಒಟ್ಟು 3250 ಸಹಿಗಳು ಮಾಡಿ ಕೇಂದ್ರ ಸರ್ಕಾರದ ಮಾಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಅನ್ನಪೂರ್ಣ ದೇವಿ ಅವರಿಗೆ ಮತ್ತು ರಾಜ್ಯ ಸರ್ಕಾರದ ಮಾಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಮೀ ಹೆಬ್ಬಾಳ್ಕರ್ ಅವರಿಗೆ ಸಹಿ ಸಂಗ್ರಹಗಳನ್ನು ಕಳಿಸಲಾಯಿತು.

ಈ ವೇಳೆ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಹೆಚ್. ಪದ್ಮಾ, ಮಮತಾ, ಆಸ್ಮಾ ಬೇಗಂ, ಡಿ.ಎಸ್.ಶರಣಬಸವ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News