×
Ad

ರಾಯಚೂರು | ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಎಐಎಂಐಎಂ ಪಕ್ಷದಿಂದ ಮನವಿ

Update: 2025-10-27 20:16 IST

ರಾಯಚೂರು: ನಗರದ ವಾರ್ಡ್ ನಂ.28ರ ಚಂದ್ರಬಂಡಾ ರಸ್ತೆಯ ಹೊಸ ಆಶ್ರಯ ಕಾಲೋನಿಯಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕ್ ಗೋಡೆ ಕುಸಿದಿದ್ದು, ಇದರಿಂದ ನೀರಿನ ಕೊರತೆ ಎದುರಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಆಲ್ ಇಂಡಿಯಾ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್ ಸಂಘಟನೆ ನೇತೃತ್ವದಲ್ಲಿ ನಿವಾಸಿಗಳು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.

ಹೊಸ ಆಶ್ರಯ ಕಾಲೋನಿಯ ಮಸ್ಜೀದ್ ಎ ಯಾಸೀನ್ ಮಸೀದಿ ಹತ್ತಿರ ಕಳೆದ 14 ದಿನಗಳಿಂದ ನೀರಿನ ಸಮಸ್ಯೆ ಎದುರಾಗಿದ್ದು, ಇಲ್ಲಿರುವ ಕುಡಿಯುವ ನೀರು ಸರಬರಾಜು ಟ್ಯಾಂಕ್ ಗೋಡೆ ಕುಸಿದಿದೆ. ಈ ಪ್ರದೇಶದಲ್ಲಿ ಸಾಕಷ್ಟು ಬಡವರು ಮತ್ತು ಕೂಲಿಕಾರ್ಮಿಕರು ವಾಸ ಮಾಡುತ್ತಿದ್ದು, ಜೀವನ ನಡೆಸಲು ತೀರಾ ಕಷ್ಟವಾಗುತ್ತಿದೆ. ಕೂಡಲೇ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಮನವಿ ಮಾಡಿದರು.

ಟ್ಯಾಂಕ್ ದುರಸ್ತಿಗೊಳಿಸುವ ವರೆಗೆ ದಿನಾಲೂ ಟ್ಯಾಂಕರ್ ಗಳ ಮೂಲಕ ನೀರಿನ ವ್ಯವಸ್ಥೆ ಮಾಡಬೇಕು. ಪ್ರದೇಶದ ಜನರಿಗೆ ಒಟ್ಟು 7-8 ಟ್ಯಾಂಕರ್ ನೀರು ಬೇಕಾಗುತ್ತದೆ. ಕೂಡಲೇ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಮುಬೀನ್ ಅಹ್ಮದ್, ಸೈಯದ್ ಜಿಲಾನ್ ಹುಸೇನ್, ಮುಹಹ್ಮದ್ ವಸೀಮ್, ವಸೀಮ್ ಅಕ್ರಮ್, ಎಂ.ಅಬ್ದುಲ್ ಸಲಾಂ, ಮುಹ್ಮದ್ ಜಾವೇದ್, ಜಾಕೀರ್, ಮುಹ್ಮದ್ ಶಾಲಂ, ಶೇಖ್ ಮುಜಾಮಿಲ್, ಶೇಖ್ ನೂರ್ ಸೇರಿದಂತೆ ಅನೇಕರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News