ರಾಯಚೂರು | ಬಾಲಕನ ಪೋಷಕರ ಪತ್ತೆಗೆ ಮನವಿ
ರಾಯಚೂರು : ಅಂದಾಜು 15 ವರ್ಷ ವಯೋಮಾನದ ವಿಕ್ರಮ ಎಂಬ ಮೂಖ ಬಾಲಕನನ್ನು ಸೆ.8 ರಂದು ಇಲ್ಲಿನ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ದಾಖಲಿಸಲಾಗಿದ್ದು, ಈತನ ಪೋಷಕರ ಪತ್ತೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಗಳು ಕೋರಿದ್ದಾರೆ.
ಬಾಲಕನು ಮೂಖನಾಗಿರುವುದರಿಂದ ಪೋಷಕರ ಬಗ್ಗೆ ಮಾಹಿತಿ ಸರಿಯಾಗಿ ನೀಡುತ್ತಿಲ್ಲ. ಕೇವಲ ತನ್ನ ಹೆಸರನ್ನು ಇಂಗ್ಲೀಷ್‌ನಲ್ಲಿ ಬರೆದು ತೋರಿಸುತ್ತಿದ್ದಾನೆ. ಬಾಲಕನು 164 ಎತ್ತರ, ಸಾದಾ ಬಿಳಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಗುಂಗುರು ಕೂದಲು ಹೊಂದಿದ್ದಾನೆ.
ಈ ಬಾಲಕನ ಪೋಷಕರು ಪತ್ತೆಯಾದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ 1-9-138, ಮಾರೆಮ್ಮ ದೇವಸ್ಥಾನ ಹತ್ತಿರ, ಆಜಾದ್ ನಗರ, ರಾಯಚೂರು-584101. ಮೊಬೈಲ್ ಸಂಖ್ಯೆ: 9663752133 ಅಥವಾ ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲಮಂದಿರ ರೆಹಮಾತ್ ಮನ್ ಸಿನ್ 1-4-157/105 ಅಮರೇಶ್ವರ ಕಾಲೋನಿ, ಆದಿತಿ ಆಸ್ಪತ್ರೆ ಎದುರುಗಡೆ ಆಶಾಪೂರ ರಸ್ತೆ, ರಾಯಚೂರು ಮೊಬೈಲ್ ಸಂಖ್ಯೆ: 9880957574ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.