×
Ad

ರಾಯಚೂರು | ಭವಿಷ್ಯಕ್ಕೆ ಜೈವಿಕ ಇಂಧನ ಅತ್ಯಗತ್ಯ : ಎಸ್.ಇ.ಸುಧೀಂದ್ರ

Update: 2025-10-17 18:58 IST

ರಾಯಚೂರು : ಜೈವಿಕ ಇಂಧನವು ನಮ್ಮೆಲ್ಲರ ಭವಿಷ್ಯದ ಇಂಧನವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಕಾರ್ಯಯೋಜನೆ ರೂಪಿಸುತ್ತಿದ್ದು, ಕೇರೋಸಿನ್ ಈಗ ಯಾವ ರೀತಿಯಲ್ಲಿ ಮನೆಮನೆಗೆ ತಲುಪುತ್ತದೆಯೋ ಅದೇ ಮಾದರಿಯಲ್ಲಿ ಬೈಯೋ ಡಿಸೈಲ್‌ನ್ನು ಕೂಡ ಮನೆಮನೆಗೆ ತಲುಪಿಸಲು ಪ್ರಯತ್ನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಸ್ ಇ ಸುಧೀಂದ್ರ ಅವರು ಹೇಳಿದರು.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ (ಕೆಎಸ್‌ಬಿಡಿಬಿ), ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ (ಕೆಎಸ್‌ಸಿಎಸ್‌ಟಿ) ಸಹಯೋಗದಲ್ಲಿ ಅಕ್ಟೋಬರ್ 17ರಂದು ಕೃಷಿ ವಿಶ್ವವಿದ್ಯಾಲಯದ ಆಡಳಿತ ಭವನ ಸಭಾಂಗಣದಲ್ಲಿ ನಡೆದ ಬಿಆರ್‌ಐಡಿಸಿ ಹಾಗೂ ಎನ್‌ಜಿಓ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕಾಲ ಬದಲಾಗುತ್ತಿರುವಂತೆಯೇ ನಾವು ಸಹ ಬದಲಾವಣೆ ಅಗತ್ಯ. ಜನರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬದ್ಧವಾಗಿದೆ. ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರ ದೂರದೃಷ್ಟಿ ಪ್ರಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ಬಳಸಿ ಜನತೆಗೆ ಅನುಕೂಲ ಕಲ್ಪಿಸುವುದು ನಮ್ಮ ಉದ್ದೇಶ. ಹೊಸ ಜೈವಿಕ ಇಂಧನ ನೀತಿ ರೂಪಿಸಲು ಸಚಿವರುಗಳಾದ ಹೆಚ್.ಕೆ. ಪಾಟೀಲ, ಎನ್.ಎಸ್. ಬೋಸರಾಜು ಮತ್ತು ಪ್ರಿಯಾಂಕ ಖರ್ಗೆ ಅವರೊಂದಿಗೆ ಚರ್ಚೆ ನಡೆದಿದೆ ಎಂದು ಹೇಳಿದರು.

ಜೈವಿಕ ಇಂಧನ ಯೋಜನೆಗಳನ್ನು ಯಶಸ್ವಿಗೊಳಿಸಲು ಬಿಆರ್‌ಐಡಿಸಿ, ಎನ್‌ಜಿಓಗಳು ಹಾಗೂ ರೈತರ ಸಹಕಾರ ಅಗತ್ಯ. ಹೊಂಗೆ, ಸುರಹೊನ್ನ ಮತ್ತು ಬೇವು ಬೆಳೆಯಂತಹ ಇಂಧನ ಬೆಳೆಗಳ ಬೆಳವಣಿಗೆಗೆ ರೈತರಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಇವುಗಳಿಂದ ಇಂಧನದ ಜೊತೆಗೆ ಸೋಪು, ಪಿನಾಯಿಲ್ ಮುಂತಾದ ಉಪಉತ್ಪನ್ನಗಳನ್ನೂ ತಯಾರಿಸಬಹುದು ಎಂದರು.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ (ಕೆಎಸ್‌ಬಿಡಿಬಿ) ಬೆಂಗಳೂರು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು ಮತ್ತು ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸಾಯನ್ಸ್ ಅಂಡ್ ಟೆಕ್ನಾಲಜಿ (ಕೆಎಸ್‌ಸಿಎಸ್‌ಟಿ) ಇವರ ಸಹಯೋಗದಲ್ಲಿ ನಗರದ ಕೃಷಿ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿನ ಸಭಾಂಗಣದಲ್ಲಿ ಅಕ್ಟೋಬರ್ 17ರಂದು ಬಿಆರ್‌ಐಡಿಸಿ ಕೇಂದ್ರಗಳ ಪ್ರತಿನಿಧಿಗಳ ಮತ್ತು ಎನ್‌ಜಿಓ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಕಾಲ ಬದಲಾದಂತೆ ನಾವು ಕೂಡ ಬದಲಾಗಬೇಕಿದೆ. ಜನತೆಗೆ ಅಗತ್ಯ ಇರುವುದನ್ನು ಪೂರೈಸಲು ರಾಜ್ಯ ಸರ್ಕಾರವು ಬದ್ಧವಾಗಿದೆ. ನವ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಬಳಸಿಕೊಂಡು ಜನತೆಗೆ ಅನುಕೂಲ ಕಲ್ಪಿಸಬೇಕು ಎಂಬುದು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರ ದೂರದೃಷ್ಟಿಯಾಗಿದೆ. ಜೈವಿಕ ಇಂಧನ ಉತ್ಪಾದನೆಗೆ ಸಂಬಂಧಿಸಿದಂತೆ ಈಗಿರುವ ಸವಾಲುಗಳು ಮತ್ತು ಸಾಧ್ಯತೆಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಹಾಗೂ ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು, ಸಚಿವರಾದ ಪ್ರಿಯಾಂಕ ಖರ್ಗೆ ಅವರೊಂದಿಗೆ ಚರ್ಚಿಸಿದ್ದು ಹೊಸ ಜೈವಿಕ ಇಂಧನ ನೀತಿ ರೂಪಿಸುವ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ರೂಪಿಸುವ ಯಾವುದೇ ರೀತಿಯ ಯೋಜನೆಗಳಿಗೆ ಬಿಆರ್‌ಐಡಿಸಿ ಮತ್ತು ಎನ್‌ಜಿಓ ಹಾಗೂ ಇನ್ನೀತರರ ಸಹಕಾರ ಅಗತ್ಯವಾಗಿದೆ. ಜೈವಿಕ ಇಂಧನವನ್ನು ವಾಹನಗಳಿಗೆ ಸಹ ಬಳಸಬಹುದಾಗಿದೆ. ದಿನೇದಿನೆ ಜೈವಿಕ ಇಂಧನಕ್ಕೆ ಹೆಚ್ಚಿನ ಬೇಡಿಕೆ ಬರಲಿದ್ದು, ಇದಕ್ಕೆ ಬೇಕಾದ ಕಚ್ಚಾ ಸಾಮಗ್ರಿಯ ಉತ್ಪಾದನೆಯ ಬಗ್ಗೆ ನಾವು ಹೆಚ್ಚಿನ ಗಮನ ಹರಿಸಬೇಕಿದೆ. ಜೈವಿಕ ಇಂಧನ ತಯಾರಿಕೆಗೆ ಸಹಕಾರಿಯಾಗುವ ಹೊಂಗೆ, ಸುರಹೊನ್ನ ಮತ್ತು ಬೇವು ಬೆಳೆ ಬೆಳೆಯಲು ರೈತರಿಗೆ ಪ್ರೋತಾಹ ನೀಡಬೇಕಿದೆ ಎಂದರು. ಹೊಂಗೆ, ಸುರಹೊನ್ನ ಮತ್ತು ಬೇವು ಬೆಳೆಯ ಉಪ ಉತ್ನನ್ನಗಳಿಂದ ಸೋಪು, ಪಿನಾಯಿಲ್ ಕೂಡ ತಯಾರಿಸಬಹುದಾಗಿದೆ ಎಂದರು.

ಸಮಾರಂಭದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ.ಹನುಮಂತಪ್ಪ ಮಾತನಾಡಿದರು. ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಶಿವಶಂಕರ ಎಲ್ ಅವರು ಪ್ರಾಸ್ತಾವಿಕ ಮಾತನಾಡಿದರು.

ಸಮಾರಂಭದಲ್ಲಿ ಸಂಶೋಧನಾ ನಿರ್ದೇಶಕರಾದ ಅಮರೇಗೌಡ, ಕಾರ್ಯನಿರ್ವಾಹಕ ಎಂಜಿನಿಯರ್ ದಿವಾಕರರಾವ್, ಡಾ.ಲೋಹಿತ್ ಬಿ.ಆರ್., ಜಯರಾಮ್, ಇವರು ಜೈವಿಕ ಇಂಧನ ಉದ್ಯಾನವನದ ಸಂಯೋಜಕರಾದ ಡಾ ಶ್ಯಾಮರಾವ ಕುಲಕರ್ಣಿ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬಸವರಾಜ ಹಾಗೂ ಬಿಆರ್‌ಐಡಿಸಿ ಕೇಂದ್ರದ 32 ಜಿಲ್ಲೆಗಳ ಪ್ರತಿನಿಧಿಗಳು ಹಾಗೂ ಎನ್‌ಜಿಓ ಪ್ರತಿನಿಧಿಗಳು ಇದ್ದರು. ಕೃಷಿ ವಿವಿಯ ಮುಖ್ಯ ವಿಜ್ಞಾನಿ ಮುನಿಸ್ವಾಮಿ ಎಸ್ ಅವರು ಸ್ವಾಗತಿಸಿದರು. ಆಕಾಶವಾಣಿ ವರದಿಗಾರರಾದ ಅಮರೇಶ ಅವರು ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News