×
Ad

ರಾಯಚೂರು | ಜಿಲ್ಲಾಡಳಿತದಿಂದ ಶ್ರೀ ಸಂತ ಸೇವಾಲಾಲ್ ಜಯಂತಿ ಆಚರಣೆ

Update: 2025-02-15 18:07 IST

ರಾಯಚೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಆಶ್ರಯದಲ್ಲಿ ಫೇ.15 ರಂದು ಶ್ರೀ ಸಂತ ಸೇವಾಲಾಲ್ ಜಯಂತಿ ಆಚರಣೆ ನಡೆಯಿತು.

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ತಹಶೀಲ್ದಾರ್‌ ಭೀಮರಾವ್ ಅವರು, ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೆ ವೇಳೆ ಶ್ರೀ ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಈ ವೇಳೆ ಮಾತನಾಡಿದ ತಹಶಿಲ್ದಾರ್‌ ಅವರು, ಪವಿತ್ರವಾದ ಭರತ ಖಂಡದಲ್ಲಿ ಜನಿಸಲು ಪುಣ್ಯ ಮಾಡಿರಬೇಕು. ಈ ನೆಲದಲ್ಲಿ ಅನೇಕ ಸಾದು ಸಂತರು ಶರಣರು ಜನಿಸಿ ನಮಗೆ ಉತ್ತಮವಾದ ಜೀವನ ಮೌಲ್ಯಗಳನ್ನು ತಿಳಿಸಿದ್ದಾರೆ. ಅಂತಹ ಮಹನಿಯರಲ್ಲಿ ಶ್ರೀ ಸಂತ ಸೇವಲಾಲ್ ಅವರು ಸಹ ಒಬ್ಬರಾಗಿದ್ದಾರೆ. ಶ್ರೀ ಸಂತ ಸೇವಾಲಾಲ ಅವರು ಹೇಳಿದ ತತ್ವಗಳ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು ಎಂದು ತಿಳಿಸಿದರು.

ಸಮಾಜದ ಕೋಶಾಧ್ಯಕ್ಷರಾದ ಜೀವಲೆಪ್ಪ ನಾಯಕ್ ಅವರು ಮಾತನಾಡಿ, ಶ್ರೀ ಸಂತ ಸೇವಾಲಾಲ ಅವರು ಶ್ರಮವಹಿಸಿ ಮತ್ತು ಹಲವಾರು ಸವಾಲುಗಳನ್ನು ಎದುರಿಸಿ ಸಮಾಜವನ್ನು ಕಟ್ಟಿ ಬೆಳೆಸಿದ ಬಗ್ಗೆ ವಿವರಿಸಿದರು.

ಅಖಿಲ ಭಾರತ ಬಂಜಾರ ಸಮಾಜದ ಜಿಲ್ಲಾಧ್ಯಕ್ಷರಾದ ನಾರಾಯಣಪ್ಪ ನಾಯಕ್ ಅವರು ಮಾತನಾಡಿ, ಬಂಜಾರ ಸಮಾಜ ಬಾಂಧವರು ಎಲ್ಲರೂ ಒಗ್ಗೂಡಿ ಸಮಾಜದ ಏಳ್ಗೆಗೆ ದುಡಿಯಬೇಕು. ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಸಮಾರಂಭದಲ್ಲಿ ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಪವಾರ್, ಬಂಜಾರ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ಹುಚ್ಚಪ್ಪ ನಾಯಕ್, ಅಖಿಲ ಭಾರತ ಬಂಜಾರ ಮಹಿಳಾ ಮುಖಂಡರಾದ ರಾಧಮ್ಮ ಬಾಯಿ, ಬಂಜಾರ ಮಹಿಳಾ ಸಮಾಜದ ಮುಖಂಡರಾದ ಜ್ಯೋತಿ ಬಾಪುರಿತಾಂಡಾ, ತಾಲೂಕಾಧ್ಯಕ್ಷರಾದ ದೇವಪ್ಪ ನಾಯಕ್, ಬಂಜಾರ ಸಮಾಜದ ಸದಸ್ಯರಾದ ಶಿವಣ್ಣ ನಾಯಕ್, ಲತೇಪ್ಪ ನಾಯಕ್ ಹಾಗೂ ಇನ್ನೀತರರು ಉಪಸ್ಥಿತರಿದ್ದರು.

ಸನ್ಮಾನ :

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿಯಾದ ಡಾ.ದಂಡಪ್ಪ ಬಿರಾದಾರ ಅವರಿಗೆ ಇತ್ತೀಚಿಗೆ ಉತ್ತಮ ಮತದಾರ ಸಾಕ್ಷರತಾ ಸಂಪನ್ಮೂಲ ವ್ಯಕ್ತಿ ಎಂದು ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಬಂಜಾರ ಸೇವಾ ಸಮಾಜದ ಮುಖಂಡರು, ನೌಕರ ಬಾಂಧವರು ಸನ್ಮಾನಿಸಿ ಗೌರವಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News