ರಾಯಚೂರು | ಅತಿರೇಕದ ಅಭಿಮಾನದಿಂದ ಚಿನ್ನಸ್ವಾಮಿ ದುರಂತ ಸಂಭವಿಸಿದೆ: ವಿನಯ ಗುರೂಜಿ
Update: 2025-06-05 18:54 IST
ರಾಯಚೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣವು ಅಭಿಮಾನ ಅತಿರೇಕವಾದಾಗ ಅಜ್ಞಾನಕ್ಕೆ ತಿರುಗಿ ಇಂತಹ ಅವಘಡ ಸಂಭವಿಸುತ್ತದೆ ಎಂದು ವಿನಯ ಗುರೂಜಿ ಅಭಿಪ್ರಾಯಪಟ್ಟರು.
ಅವರಿಂದು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಘಟನೆಯಲ್ಲಿ ಪ್ರತಿಯೊಬ್ಬರ ತಪ್ಪಿದೆ. ಕಾರ್ಯಕ್ರಮ ಆಯೋಜಕರಿಗೆ ಎಷ್ಟು ಜನ ಸೇರುತ್ತಾರೆ ಎಂದು ಗೊತ್ತಿರಬೇಕಿತ್ತು. ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ನೋವು ಅನ್ಯರಿಗೆ ತಿಳಿಯದು, ಇಂತಹ ದುರಂತಗಳು ಭವಿಷ್ಯದಲ್ಲಿ ಸಂಭವಿಸಬಾರದು, ಅಭಿಮಾನಿಗಳು ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.