×
Ad

ರಾಯಚೂರು | ನಿರಂತರ ಮಳೆ : ನಿಂತ ಕಾರಿನ ಮೇಲೆ ಬಿದ್ದ ಬೃಹತ್ ಗಾತ್ರದ ಮರ

Update: 2025-10-25 19:18 IST

ರಾಯಚೂರು: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರದ ವಾರ್ಡ್‌ ನಂ.15ರ ಜಾನಿ ಮೊಹಲ್ಲಾ ಪ್ರದೇಶದಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಓಮಿನಿ ಕಾರಿನ ಮೇಲೆ ಬೃಹತ್‌ ಗಾತ್ರದ ಮರ ಉರುಳಿ ಬಿದ್ದಿದ್ದು, ಕಾರು ಸಂಪೂರ್ಣವಾಗಿ ಜಖಂಗೊಂಡು ಅಪ್ಪಚ್ಚಿಯಾಗಿದೆ.

ಕಾರು ಜಾಫರ್‌ ಎಂಬುವವರಿಗೆ ಸೇರಿದ್ದು, ಅವರು ಕಿರಾಣಿ ಅಂಗಡಿಗಳಿಗೆ ದಿನಸಿ ವಸ್ತುಗಳನ್ನು ಪೂರೈಸುವ ಮೂಲಕ ಜೀವನ ಸಾಗಿಸುತ್ತಿದ್ದರು. ಈಗ ಕಾರು ಸಂಪೂರ್ಣ ನಾಶವಾಗಿರುವುದರಿಂದ ಜೀವನ ನಿರ್ವಹಣೆಗೆ ದಿತೋಚದಾಗಿಯೆಂದು ಜಾಫರ್‌ ಅಳಲು ತೋಡಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News