×
Ad

ರಾಯಚೂರು | ಯುವ ಕವಿಗಳಿಗೆ ವೇದಿಕೆಯಾದ 'ದನಿಗೂಡು' ಹನಿಗವನ ಸಂಕಲನ : ಸಾಹಿತಿ ವೀರ ಹನುಮಾನ್

ಬಶೀರ್ ಅಹ್ಮದ್ ಹೊಸಮನಿ ಅವರ ಸಾಹಿತ್ಯ ಕೃಷಿ ಅನನ್ಯ; 'ದನಿಗೂಡು' ಕೃತಿ ಲೋಕಾರ್ಪಣೆ

Update: 2026-01-12 20:59 IST

ರಾಯಚೂರು: ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಬಶೀರ್ ಅಹ್ಮದ್ ಹೊಸಮನಿ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಕಾವ್ಯ, ನಾಟಕ, ಕಥೆಗಳ ಜೊತೆಗೆ ಇತಿಹಾಸ ಮತ್ತು ಪಂಚಾಯತ್ ಸಾಹಿತ್ಯದಲ್ಲೂ ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹಿರಿಯ ಸಾಹಿತಿ ಹಾಗೂ ವಿದ್ವಾಂಸ ವೀರ ಹನುಮಾನ್ ನುಡಿದರು.

ನಗರದ ಎಸ್.ಆರ್.ಕೆ. ಬಿ.ಎಡ್ ಶಿಕ್ಷಣ ಮಹಾವಿದ್ಯಾಲಯದ ಟ್ಯಾಗೋರ್ ಭವನದಲ್ಲಿ ಹೊಸಮನಿ ಪ್ರಕಾಶನದ ವತಿಯಿಂದ ಆಯೋಜಿಸಲಾಗಿದ್ದ ರಾಯಚೂರು ಜಿಲ್ಲಾ ಹನಿಗವನ ಸಂಕಲನ 'ದನಿಗೂಡು' ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಈ ಸಂಕಲನವು ಯುವ ಬರಹಗಾರರಿಗೆ ಉತ್ತಮ ವೇದಿಕೆಯಾಗಿದೆ. ಹಿರಿಯ ಸಾಹಿತಿಗಳ ಮಾರ್ಗದರ್ಶನ ಹಾಗೂ ಯುವ ಪೀಳಿಗೆಯ ಚಿಂತನೆಗಳನ್ನೊಳಗೊಂಡ ಒಟ್ಟು 94 ಕವಿಗಳ ಹನಿಗವನಗಳು ಇದರಲ್ಲಿ 'ದನಿಗೂಡಿ' ಪುಸ್ತಕ ರೂಪದಲ್ಲಿ ಹೊರಬಂದಿರುವುದು ಸಂತಸದ ವಿಷಯ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಹಾಂತೇಶ್ ಮಸ್ಕಿ ಅವರು ಕೃತಿಯನ್ನು ಬಿಡುಗಡೆಗೊಳಿಸಿದರು. ಹಿರಿಯ ಕವಿ ವೈ.ಬಿ. ಹಾಲ್ಬಾವಿ ಅವರು ಕೃತಿ ಪರಿಚಯ ಮಾಡಿಕೊಟ್ಟರು.

ಕಾರ್ಯಕ್ರಮದಲ್ಲಿ ಹೊಸಮನಿ ಪ್ರಕಾಶನದ ಸಲಹೆಗಾರ ಶಂಶಾದ್ ಬೇಗಂ, ಜಿಲ್ಲಾ ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಣ್ಣ ಮ್ಯಾದರ್, ಕರ್ನಾಟಕ ವಿಕಾಸರಂಗದ ಜಿಲ್ಲಾಧ್ಯಕ್ಷ ಭೀಮನಗೌಡ ಇಟಗಿ, ಗಡಿನಾಡು ಕನ್ನಡ ಸಂಘದ ಅಧ್ಯಕ್ಷ ಹಾಗೂ ತೆಲಂಗಾಣದ ಕೃಷ್ಣಮಂಡಲದ ಕ್ಷೇತ್ರ ಶಿಕ್ಷಣಾಧಿಕಾರಿ ನಿಜಮುದ್ದೀನ್ ಉಪಸ್ಥಿತರಿದ್ದರು.

ಹೊಸಮನಿ ಪ್ರಕಾಶನದ ಅಧ್ಯಕ್ಷ ಬಶೀರ್ ಅಹ್ಮದ್ ಹೊಸಮನಿ ಸ್ವಾಗತಿಸಿದರು. ಶಿಕ್ಷಕಿ ವೈ.ಕೆ. ಯಶೋದಾ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಪರ ಹೋರಾಟಗಾರ ಅಶೋಕ್ ಕುಮಾರ್ ಸಿ.ಕೆ. ಜೈನ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News