×
Ad

ರಾಯಚೂರು | ಯುವಕ ಕಾಣೆ : ಪತ್ತೆಗೆ ಮನವಿ

Update: 2026-01-12 21:53 IST

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಪಲಕನಮರಡಿ ಗ್ರಾಮದ ಶಿವಮೂರ್ತಿ ತಂದೆ ನಿಂಗಣ್ಣ (20) ಎಂಬ ಯುವಕ ರಾಯಚೂರಿನ ಯರಮರಸ್ ಕ್ಯಾಂಪಿನಲ್ಲಿರುವ ಬಿಸಿಎಂ ಇಲಾಖೆಯ ಡಿ. ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕರ ವಸತಿಗೃಹದಲ್ಲಿ ವಾಸವಾಗಿದ್ದು, ಯುವಕನು 2025ರ ಎ.13ರಂದು ಬೆಳಿಗ್ಗೆ 9.30 ಗಂಟೆ ಸುಮಾರಿಗೆ ಹಾಸ್ಟೇಲ್‌ನಿಂದ ತನ್ನ ಸ್ನೇಹಿತರೊಂದಿಗೆ ಯರಮರಸ್ ಕ್ಯಾಂಪಿನವರೆಗೆ ಹೋಗಿದ್ದು, ಬಳಿಕ “ರಾಯಚೂರಿಗೆ ಹೋಗಿ ಬರುತ್ತೇನೆ” ಎಂದು ಹೇಳಿ ಹೊರಟವನು ಇಲ್ಲಿಯವರೆಗೆ ವಸತಿಗೃಹಕ್ಕೆ ಮರಳಿಲ್ಲ. ಈ ಸಂಬಂಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 57/2025ರಡಿ ಕಾಣೆಯಾದ ಪ್ರಕರಣ ದಾಖಲಿಸಲಾಗಿದೆ.

ಕಾಣೆಯಾದ ಯುವಕನ ಚಹರೆ ವಿವರ:

ವಯಸ್ಸು 20 ವರ್ಷ, ಜಾತಿ ಕುರುಬರು, ಉದ್ಯೋಗ ವಿದ್ಯಾರ್ಥಿ, ಗೋಧಿ ಬಣ್ಣದ ಮೈಬಣ್ಣ, ದುಂಡನೆಯ ಮುಖ, ತಲೆಯ ಮೇಲೆ ಕಪ್ಪು ಕೂದಲು. ಬಿಳಿ ಬಣ್ಣದ ಲೈನ್ ಫುಲ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ. ಕೊರಳಲ್ಲಿ ಗುಲಾಬಿ ಬಣ್ಣದ ಟವೆಲ್ ಇತ್ತು. ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮಾತನಾಡುತ್ತಾನೆ.

ಈ ಯುವಕನ ಕುರಿತು ಯಾವುದೇ ಮಾಹಿತಿ ಅಥವಾ ಸುಳಿವು ದೊರೆತಲ್ಲಿ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಮೊಬೈಲ್ ಸಂಖ್ಯೆ 9480803850 ಅಥವಾ ಗ್ರಾಮೀಣ ವೃತ್ತದ ಸಿಪಿಐ ಮೊಬೈಲ್ ಸಂಖ್ಯೆ 9480803832 ಗೆ ಸಂಪರ್ಕಿಸುವಂತೆ ರಾಯಚೂರು ಗ್ರಾಮೀಣ ವೃತ್ತ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News