ರಾಯಚೂರು | ಗಣತಿಯಲ್ಲಿ ಮಾಜಿ ದೇವದಾಸಿಯರ ಕುಟುಂಬದ ಸದಸ್ಯರ ಹೆಸರು ಸೇರಿಸಲು ಒತ್ತಾಯ
ರಾಯಚೂರು: ಮಾಜಿ ದೇವದಾಸಿಯರ ಕುಟುಂಬದ ಸದಸ್ಯರನ್ನು ಗಣತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಪುನರ್ವಸತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಸಮಿತಿ ವತಿಯಿಂದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸರ್ಕಾರ ದೇವದಾಸಿ ಮಹಿಳೆಯರ ಸರ್ವೆ ನಡೆಸುತ್ತಿದ್ದನ್ನು ಸ್ವಾಗತಿಸುತ್ತದೆ, ಗಣತಿ ಪಟ್ಟಿಯಲ್ಲಿ ದೇವದಾಸಿ ಮಹಿಳೆಯರ ಕುಟುಂಬದ ಸದಸ್ಯರನ್ನು ಸೇರ್ಪಡೆ ಮಾಡದೇ ಇರುವುದರಿಂದ ದೇವದಾಸಿಯರ ಮಕ್ಕಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ, ಕೇವಲ ದೇವದಾಸಿಯರನ್ನು ಪರಿಗಣಿಸಿತ್ತು,
ಇದರಿಂದಾಗಿ ಮಕ್ಕಳಿಗೆ ಯಾವುದೇ ಸೌಲಭ್ಯ ಸಿಗದೇ ಶಿಕ್ಷಣ, ಉದ್ಯೋಗ ಸೇರಿದಂತೆ ಇತರೆ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ದೇವದಾಸಿಯರ ಕುಟುಂಬದ ಸದಸ್ಯರನ್ನು ಗಣತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು, ಸರ್ಕಾರದ ಸೌಲಭ್ಯಗಳು ದೇವದಾಸಿಯರ ಮಕ್ಕಳಿಗೆ ದೊರೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಅಧ್ಯಕ್ಷೆ ಹೆಚ್.ಪದ್ಮಾ, ತಾಲೂಕಾಧ್ಯಕ್ಷೆ ಜಮಲಮ್ಮ, ಕಾರ್ಯದರ್ಶಿ ಮಹಾದೇವಿ, ಗೌರವಾಧ್ಯಕ್ಷ ಕೆ.ಜಿ.ವೀರೇಶ, ರೇಣುಕಮ್ಮ, ಮುತ್ತಮ್ಮ, ಹೊಸುರಮ್ಮ, ಡಿ.ಎಸ್. ಶರಣಬಸವ ಸೇರಿದಂತೆ ಅನೇಕರು ಇದ್ದರು.