ರಾಯಚೂರು ಜಿಲ್ಲಾ ಉತ್ಸವ: ಮಹಿಳಾ ಕವಿಗೋಷ್ಠಿಗೆ ದೇವದುರ್ಗದ ಕುಮಾರಿ ಪದ್ಮಾವತಿ ಆಯ್ಕೆ
Update: 2026-01-27 22:43 IST
ದೇವದುರ್ಗ: ಫೆ.5, 6 ಮತ್ತು 7ರಂದು ನಡೆಯಲಿರುವ ರಾಯಚೂರು ಜಿಲ್ಲಾ ಉತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಮಹಿಳಾ ಕವಿಗೋಷ್ಠಿಗೆ ದೇವದುರ್ಗ ತಾಲೂಕಿನ ಯರಮಸಾಳ ಗ್ರಾಮದ ಕುಮಾರಿ ಪದ್ಮಾವತಿ ಆಯ್ಕೆಯಾಗಿದ್ದಾರೆ.
ಕುಮಾರಿ ಪದ್ಮಾವತಿ ಅವರು ರಾಯಚೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಆಗಿದ್ದಾರೆ. ಜಿಲ್ಲಾ ಉತ್ಸವದಂತಹ ಮಹತ್ವದ ವೇದಿಕೆಗೆ ಆಯ್ಕೆಯಾಗಿರುವುದು ದೇವದುರ್ಗ ತಾಲೂಕಿನಿಗೆ ಹೆಮ್ಮೆಯ ವಿಷಯವಾಗಿದೆ.
ಅವರ ಆಯ್ಕೆಗೆ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡ ಪ್ರೇಮಿಗಳು, ವಿವಿಧ ಸಂಘಟನೆಗಳು ಹಾಗೂ ಕನ್ನಡಪರ ಒಕ್ಕೂಟ ಸೇರಿದಂತೆ ದೇವದುರ್ಗ ತಾಲೂಕಿನ ಸಾಂಸ್ಕೃತಿಕ ಅಭಿಮಾನಿಗಳು ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ದೇವದುರ್ಗ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್. ಶಿವರಾಜ್ ಹಾಗೂ ಪರಿಷತ್ ಬಳಗವೂ ಕುಮಾರಿ ಪದ್ಮಾವತಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ.