ರಾಯಚೂರು | ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಡಾ.ದುರಗೇಶ್ ಆಯ್ಕೆ
Update: 2025-04-22 16:48 IST
ರಾಯಚೂರು : ರಾಜ್ಯ ಸರ್ಕಾರಿ ನೌಕರರಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದವರಿಗೆ ನೀಡಲಾಗುವ ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿಯ 2023ನೇ ಸಾಲಿನ ಪಟ್ಟಿಗೆ ನಗರದ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಡಾ ದುರಗೇಶ್ ಅವರು ಆಯ್ಕೆಯಾಗಿದ್ದು, ಸಂಸ್ಥೆಯ ಅಧಿಕಾರಿ, ಸಿಬ್ಬಂದಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.
ಆಯ್ಕೆ ಸಮಿತಿ ಸಭೆಯಲ್ಲಿ 2023ನೇ ಸಾಲಿನಲ್ಲಿ ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆನ್ಲೈನ್ ಮೂಲಕ ಸ್ವೀಕೃತವಾದ ಅರ್ಜಿಗಳನ್ನು ಆಯಾ ಇಲಾಖೆಗಳಿಗೆ ಶಿಫಾರಸ್ಸಿಗಾಗಿ ಕಳುಹಿಸಿದ್ದು, ಇಲಾಖಾ ಕಾರ್ಯದರ್ಶಿಗಳಿಂದ ಅನುಮೋದಿತವಾಗಿ ಬಂದ ಅರ್ಜಿಗಳನ್ನು ಸಮಿತಿ ಸಭೆಯಲ್ಲಿ ಮಾಡಲಾಗಿದೆ.