ರಾಯಚೂರು | ಮನೆ ಕಳ್ಳತನ : ಮೂವರ ಬಂಧನ
ರಾಯಚೂರು : ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬಾಗಿಲು ಮುರಿದು ನಗದು ಹಣ ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ರಾಕೇಶ ಕಲಮಲಾ, ಯಶವಂತ ಅಲಿಯಾಸ್ ಯಲ್ಲಾಲಿಂಗ ಕಲಮಲಾ, ಶಿವಕುಮಾರ ಅಲಿಯಾಸ್ ಶಿವ ಕಲಮಲಾ ಒಂದೇ ಗ್ರಾಮದ ಆರೋಪಿಗಳಾಗಿದ್ದು, ಬಂಧಿತರಿಂದ ಒಂದುವರೆ ತೊಲೆ ಬಂಗಾರದ ಟಿಕಮಣಿ(ಹಾರ), ಎರಡು ಜೊತೆ ಬೆಳ್ಳಿಯ 24 ತೊಲೆ ಕಾಲು ಚೈನ್‍ಗಳು, ನಗದು ಹಣ ಸೇರಿ ಒಟ್ಟು 88,000 ರೂ. ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆ.26 ರಂದು ಕಲಮಲಾ ಗ್ರಾಮದ ವೆಂಕಟೇಶ ಎನ್ನುವವರ ಮನೆಯಲ್ಲಿ ಯಾರು ಇಲ್ಲದೆ ಸಮಯದಲ್ಲಿ ಬಾಗಿಲು ಕೀಲಿ ಹೊಡೆದು ಆಲಮಾರಿ ಮುರಿದು 1/2 ತೊಲೆ ಬಂಗಾರದ ಟಿಕಮಣಿ (ಹಾರ) ಎರಡು ಜೊತೆ ಬೆಳ್ಳಿಯ ಕಾಲು ಚೈನ್‍ಗಳು ಒಟ್ಟು 24 ತೊಲೆ, ಹಾಗೂ ನಗದು ಹಣ ಸೇರಿ ಒಟ್ಟು 88,000 ರೂ. ಗಳ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ, ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಸ್ವಾಮಿ, ಹಾಗೂ ಜಿ.ಹರೀಶ,ಪೊಲೀಸ್ ಉಪಾಧೀಕ್ಷಕ ಶಾಂತವೀರ ಈ. ಅವರ ಮೇಲ್ವಿಚಾರಣೆಯಲ್ಲಿ ಸಿಪಿಐ ಸಾಬಯ್ಯ ನೇತೃತ್ವದಲ್ಲಿ ಪಿಎಸ್‍ಐ ಪ್ರಕಾಶರೆಡ್ಡಿ ಡಂಬಳ ಹಾಗೂ ಸಿಬ್ಬಂದಿಯವರಾದ ನಾಗಪ್ಪ ಎಎಸ್ಐ ಗೌಸ್ ಪಾಷಾ, ಶಾಂತಕುಮಾರ, ನರಸಿಂಹಲು, ಮಹೆಬೂಬ ಅಲಿ, ಮಹೇಶ್ವರ ರೆಡ್ಡಿ ಮತ್ತು ಅಜೀಮ್ ರವರನ್ನು ಒಳಗೊಂಡ ವಿಶೇಷ ತಂಡ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಪ್ರಕರಣ ಕಾರ್ಯಾಚರಣೆಗೆ ನಿಯೋಜಿಸಿದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿದ್ದಾರೆ.