×
Ad

ರಾಯಚೂರು | ವಿದ್ಯುತ್ ತಂತಿ ತಗುಲಿ ಲೈನ್‍ಮ್ಯಾನ್ ಮೃತ್ಯು

Update: 2025-10-27 20:04 IST

ರಾಯಚೂರು: ವಿದ್ಯುತ್ ದುರಸ್ತಿ ಮಾಡುವ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿ ಲೈನ್‍ಮ್ಯಾನ್ ಮೃತಪಟ್ಟಿರುವ ಘಟನೆ ಲಿಂಗಸೂಗುರು ತಾಲ್ಲೂಕಿನ ಗೊರೇಬಾಳ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

ಮೃತರನ್ನು  ಲೈನ್‍ಮ್ಯಾನ್ ನಾಗರಾಜ ಡೊಳ್ಳಿ ಈಚನಾಳ (32)ಎಂದು ಗುರುತಿಸಲಾಗಿದೆ.

ಗೊರೇಬಾಳ ಗ್ರಾಮ ಪಂಚಾಯಿತಿಯಲ್ಲಿ ಲೈನ್‍ಮನ್ ಆಗಿ ನಾಗರಾಜ ಸೇವೆ ಸಲ್ಲಿಸುತ್ತಿದ್ದು, ಭಾನುವಾರ ಸಂಜೆ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದು, ಈ ಬಗ್ಗೆ ವಿದ್ಯುತ್ ಪರಿವರ್ತಕದಲ್ಲಿ ಪರಿಶೀಲನೆ ವೇಳೆ ವಿದ್ಯುತ್ ತಂತಿ ತಗುಲಿ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ಅವರನ್ನು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತರಿಗೆ ಮೂರು ಜನ ಪುತ್ರಿಯರು ಇದ್ದಾರೆ. ಸ್ವಾಗ್ರಾಮ ಈಚನಾಳದ ಅವರ ಜಮೀನಿನಲ್ಲಿ ಸೋಮವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಿತು.

ಗ್ರಾಮದಲ್ಲಿ ಅನೋನ್ಯವಾಗಿದ್ದ ನಾಗರಾಜನ ಸಾವು ಗ್ರಾಮಸ್ಥರಲ್ಲಿ ದಿಭ್ರಮೆಗೊಳಿಸಿದ್ದು ಶೋಕ ಸಾಗರವಾಗಿ, ಜನ ಸಾಗರವೇ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು ಎಂದು ಗ್ರಾಮಸ್ಥರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News