ರಾಯಚೂರು: ಜಂತರ್ ಮಂತರ್ ನಲ್ಲಿ ಹೋರಾಟಗಾರರನ್ನು ಬಂಧಿಸಿ ಸಂವಿಧಾನಿಕ ಹಕ್ಕು‌ ಕಸಿದುಕೊಂಡು ಹೋರಾಟ ಹತ್ತಿಕ್ಕುವ ಕೆಲಸ ಮಾಡಲಾಗಿದೆ ಎಂದು ಆರೋಪಿಸಿ ಮತಕಾವಲು ಸಮಿತಿ ಹಾಗೂ ಎಸ್ ಐಆರ್ ವಿರೋಧಿ ಸಮಿತಿಯಿಂದ ನಗರದ ತೀನ್ ಖಂದಿಲ್ ವೃತ್ತಿದಿಂದ ಡಿಹೆಚ್ ಒ ಕಚೇರಿ ಕೇಂದ್ರ ಬಸ್ ನಿಲ್ದಾಣ ಮಾರ್ಗವಾಗಿ ಡಾ.ಬಿ ಆರ್ ಅಂಬೇಡ್ಕರ್ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಯಿತು.

ಪ್ರತಿಭಟನೆಯಲ್ಲಿ ಹೋರಾಟಗಾರ ಕೆ.ಜಿ ವೀರೇಶ, ಮಾರೆಪ್ಪ ಹರವಿ, ಎಸ್ ಡಿಪಿಐನ ಜಿಲ್ಲಾ ಮುಖಂಡ ಮುಹಮ್ಮದ್ ಅತೀಕ್, ಎಸ್ ಐ ಆರ್ ವಿರೋಧಿ ಹೋರಾಟ ಸಮಿತಿಯ ಅಂಜನೇಯ ಕುರುಬದೊಡ್ಡಿ, ಖಾಜಾ ಅಸ್ಲಂ ಅಹ್ಮದ್, ಮೊಹಮ್ಮದ್ ಮುಷ್ತಾಕ್, ಜಮಾತೆ ಇಸ್ಲಾಂ ಹಿಂದ್ ಸ್ಥಾನಿಕ ಅಧ್ಯಕ್ಷ ಅಸಿಮುದ್ದೀನ್ ಅಖ್ತರ್, ಡಿ.ಎಸ್ ಶರಣಬಸವ, ಶರಣಪ್ಪ, ಮಹೇಶ ಚೀಕಲಪರ್ವಿ,ಜಾನ್ ವೆಸ್ಲಿ, ಎಸ್ ಡಿಪಿಐ ಮುಖಂಡರಾದ ಅಕ್ಬರ್ ನಾಗುಂಡಿ, ತೌಸೀಫ್ ಅಹ್ಮದ್, ಮತೀನ್ ಅನ್ಸಾರಿ, ಖಾಜಾ ಮೊಹಿನುದ್ದೀನ್ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor