ರಾಯಚೂರು ಮಹಾನಗರ ಪಾಲಿಕೆಯಿಂದ ಕೆಸರು ಮಿಶ್ರಿತ ನೀರು ಪೂರೈಕೆ : ಸಾರ್ವಜನಿಕರ ಆಕ್ರೋಶ
Update: 2025-08-11 18:08 IST
ರಾಯಚೂರು: ನಗರದ ವಾರ್ಡ್ ನಂಬರ್ 21ರ ದೇವಿನಗರ ಬಡಾವಣೆಯಲ್ಲಿ ಇಂದು ರಾಯಚೂರು ಮಹಾನಗರ ಪಾಲಿಕೆಯಿಂದ ಬಿಡುವ ಸಾರ್ವಜನಿಕ ನಳದಲ್ಲಿ ಕೆಸರು ಮಿಶ್ರಿತ ನೀರು (ಹೊಂಡು ಮಿಶ್ರಿತ ನೀರು) ಬಿಟ್ಟಿದ್ದು, ಬಡಾವಣೆಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಎರೆಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದ್ದು, ದೇವಿನಗರ ಬಡಾವಣೆಯಲ್ಲಿ ಕಳೆದ 5 ದಿನಗಳಿಂದ ನೀರು ಪೂರೈಕೆ ಆಗಿರಲಿಲ್ಲ. ಇಂದು ನೀರು ಬಿಟ್ಟರೂ ಕುಡಿಯಲು ಯೋಗ್ಯವಿಲ್ಲದಂತಾಗಿದೆ. ಇಂತಹ ನೀರು ಕುಡಿದರೆ ವಾಂತಿ ಭೇದಿ ಹಾಗೂ ಗೃಹ ಬಳಕೆಗೆ ಮುಂದಾಗಿದ್ದಲ್ಲಿ ಚರ್ಮರೋಗದ ಭೀತಿ ಇದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ಇದು ಕೇವಲ ಒಂದು ಬಡಾವಣೆಯ ಸಮಸ್ಯೆಯಲ್ಲ. ರವಿವಾರ ಎಲ್ ಬಿಎಸ್ ನಗರದಲ್ಲಿಯೂ ಇಂತಹದ್ದೆ ಕೆಸರು ಮಿಶ್ರಿತ ನೀರು ಪೂರೈಕೆ ಮಾಡಲಾಗಿತ್ತು.