×
Ad

ರಾಯಚೂರು | ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯ ಕಲ್ಪಿಸಲು ಮನವಿ

Update: 2024-11-12 21:27 IST

ರಾಯಚೂರು : ಇಸ್ರೇಲ್ ಮಾದರಿಯ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ನೀರಾವರಿ ಯೋಜನೆ ಹೋರಾಟ ಸಮಿತಿಯಿಂದ ಇಂದು ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರಗೆ ಮನವಿ ಸಲ್ಲಿಸಲಾಯಿತು.

ನಂದವಾಡಗಿ ಏತ ನೀರಾವರಿ ಈಗಾಲೇ ತಟಸ್ಥಗೊಂಡಿರುವುದನ್ನು ಅನುಷ್ಠಾನಗೊಳಿಸಬೇಕು. 2017ರಲ್ಲಿ ಆರಂಭವಾದ ಕಾಮಗಾರಿ 2020-21ರ ವೇಳೆಗೆ ಜಮೀನಿಗೆ ನೀರು ಹರಿಸಬೇಕಿತ್ತು. ಜಾಕ್ವೆಲ್ ಸೇರಿದಂತೆ ಮೂರು ಹಂತದ ಕಾಮಗಾರಿಗಳ ಶೇ.90 ಕಾಮಗಾರಿಗಳು ಮುಗಿದಿವೆ. ಹನಿ ನೀರಾವರಿ ಬದಲು ಕೃಷಿ ಹೊಂಡ ನಿರ್ಮಿಸಿ, ಪಂಪ್‌ಸೆಟ್ ಜೋಡಣೆಯಿಂದ ನೀರಾವರಿ ಯೋಜನೆಗಾಗಿ ವಿಶೇಷ ಪ್ಯಾಕೇಜ್ ಮಾಡಬೇಕು ಎಂದು ಆಗ್ರಹಿಸಿದರು.

ಹೋರಾಟಗಾರರಾದ ಬಸವಂತರಾಯ ಕುರಿ, ಎಚ್.ಬಿ ಮುರಾರಿ, ಶರಣಗೌಡ ಪಾಟೀಲ ಬಸ್ಸಾಪುರ, ಕಾರ್ಯದರ್ಶಿ ರಮೇಶ ಶಾಸ್ತ್ರಿ, ಮುಖಂಡರಾದ ಮಲ್ಲೇಶಗೌಡ ಮಟ್ಟೂರು, ಆದನಗೌಡ ಪಾಟೀಲ, ದುರುಗಣ್ಣ, ಶಶಿಧರ ಪಾಟೀಲ, ಚೆನ್ನಾರೆಡ್ಡಿ ಬಿರಾದರ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News