ರಾಯಚೂರು | ಅಂಗಡಿಗೆ ನುಗ್ಗಿ ಸೊತ್ತು ಕಳವು
Update: 2025-05-25 21:30 IST
ರಾಯಚೂರು : ಜಿಲ್ಲೆಯ ಕವಿತಾಳ ಪಟ್ಟಣದ ಬಜಾರ್ ರಸ್ತೆಯಲ್ಲಿರುವ ಮೂರು ಅಂಗಡಿಗಳ ಬೀಗ ಮುರಿದು ಕಳ್ಳರು ಹಣ ಕಳವು ಮಾಡಿದ ಘಟನೆ ನಡೆದಿದೆ.
ಇಲ್ಲಿನ ಬಜಾರ್‌ನಲ್ಲಿನ ಕಿರಾಣಿ ಅಂಗಡಿ, ರಸಗೊಬ್ಬರ ಮಾರಾಟ ಮಳಿಗೆ ಮತ್ತು ಜನರಲ್ ಸ್ಟೋರ್ ಬೀಗ ಮುರಿಯಲಾಗಿದ್ದು, 'ಕಿರಾಣಿ ಅಂಗಡಿಯಲ್ಲಿ 4 ಸಾವಿರ ರೂ. ನಗದು, ಚಿಲ್ಲರೆ ಕಾಸು, ಪಂಚಲೋಹದ ಎರಡು ಸಣ್ಣ ಗಾತ್ರದ ವಿಗ್ರಹ ಮತ್ತು ಸಿಗರೇಟ್, ಗುಟ್ಕಾ ಪ್ಯಾಕೆಟ್ ಕಳುವಾಗಿದೆ' ಎಂದು ಅಂಗಡಿ ಮಾಲಕ ಸೂಗೂರೇಶ ಗಡ್ಡಿ ಅವರು ತಿಳಿಸಿದ್ದಾರೆ.
ರಸಗೊಬ್ಬರ ಮಾರಾಟ ಮಳಿಗೆ ಮತ್ತು ಜನರಲ್ ಸ್ಟೋರ್‌ನ ಬೀಗವನ್ನು ಮುರಿಯಲಾಗಿದೆ. ಅಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಕವಿತಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.