ರಾಯಚೂರು: ಸಂಚಾರ ನಿಯಮ ಉಲ್ಲಂಘನೆ; 50 ಆಟೋಗಳನ್ನು ವಶಕ್ಕೆ ಪಡೆದ ಸಂಚಾರಿ ಪೊಲೀಸರು
ರಾಯಚೂರು: ನಗರದಲ್ಲಿ ಲೈಸನ್ಸ್ ಇಲ್ಲದೇ, ಸಮವಸ್ತ್ರ ಧರಿಸದೇ ಹಾಗೂ ಇತರೆ ಸಂಚಾರಿ ನಿಯಮಗಳನ್ನು ಪಾಲಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ 50 ಆಟೋಗಳನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದು ತಲಾ 500ರೂ ದಂಡ ವಿಧಿಸಿದ್ದಾರೆ.
ನಗರದ ಕೇಂದ್ರ ಬಸ್ ನಿಲ್ದಾಣ, ರೈಲ್ವ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬೇಕಾ ಬಿಟ್ಟಿಯಾಗಿ ಆಟೊ ರಿಕ್ಷಾಗಳನ್ನು ನಿಲುಗಡೆ ಮಾಡದಂತೆ ಮತ್ತು ಹಲವು ಬಾರಿ ಎಚ್ಚರಿಕೆ ನೀಡಿದರೂ ಸಂಚಾರಿ ನಿಯಮ ಪಾಲಿಸದ ಕಾರಣ ಪೊಲೀಸರು ಆಟೊ ರಿಕ್ಷಾಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಮುಂದೆ ಅನಧಿಕೃತ ಆಟೋಗಳನ್ನು ನಗರದಲ್ಲಿ ಸಂಚರಿಸದಂತೆ ಸೂಚಿಸಲಾಗಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಆಟೋ ಚಲಿಸದಂತೆ ಖಡಕ್ ಎಚ್ಚರಿಕೆ ನೀಡಲಾಗಿದೆ.
ಮೊದಲ ದಿನ ನಡೆಸಿದ ಕಾರ್ಯಾಚಣೆಯಲ್ಲಿ ದಾಖಲೆಗಳನ್ನು ಹೊಂದಿರದ 50 ಆಟೊ ರಿಕ್ಷಾಗಳನ್ನು ವಶಪಡಿಸಿಕೊಂಡಿದ್ದಾರೆ. ಅನೇಕ ಆಟೊಗಳಿಗೆ ಲೈಸನ್ಸ್, ಇನ್ಸುರೆನ್ಸ್, ಪರ್ಮಿಟ್ ಹೊಂದದೆ ಇರುವುದು, ವಾಹನ ಚಾಲನೆ ಮಾಡುವಾಗ ಸಮವಸ್ತ್ರ ಧರಿಸದೇ ಆಟೊ ಚಾಲನೆ ಮಾಡುವುದು ಕಂಡುಬಂದಿದ್ದು ಇದನ್ನು ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.
ಮೊದಲ ದಿನ ರೂ.25 ಸಾವಿರ ದಂಡ ವಸೂಲಿ: ಸಂಚಾರಿ ನಿಯಮ ಪಾಲನೆಗೆ ಮುಂದಾಗದ ಆಟೋ ಚಾಲಕರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರ ಹೊರತಾಗಿ ಸುಧಾರಣೆ ಮಾಡದ ಕಾರಣ ಜುಲೈ 1 ರಿಂದ ತಿಂಗಳ ಪೂರ್ತಿ ಕಾರ್ಯಾಚರಣೆಗೆ ಇಳಿದ ಸಂಚಾರಿ ಪೊಲೀಸರು ನೋಪಾರ್ಕಿಂಗ್ (ಪಾರ್ಕಿಂಗ್ ಇಲ್ಲದ ಕಡೆ) ಆಟೊಗಳನ್ನು ನಿಲುಗಡೆ ಮಾಡಿ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿದ್ದ ಆಟೊಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದಾಖಲೆ ಹೊಂದಿಲ್ಲ. 50 ಆಟೊ ಚಾಲಕರಿಗೆ ತಲಾ 500 ದಂಡ ವಿಧಿಸಿದ್ದು ಒಟ್ಟು ರೂ.25 ಸಾವಿರ ದಂಡ ಸಂಗ್ರಹ ಮಾಡಲಾಗಿದೆ ಎಂದು ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಸಣ್ಣ ಈರೇಶ ಅವರು ತಿಳಿಸಿದ್ದಾರೆ.
ವಾಹನಗಳ ಸರಿಯಾಗಿ ದಾಖಲೆ ಇಟ್ಟುಕೊಳ್ಳದ ಹಾಗೂ ಲೈಸನ್ಸ್ ಹೊಂದಿರದ ಚಾಲಕರ ಆಟೊ ರಿಕ್ಷಾಗಳಲ್ಲಿ ಪಾಲಕರು ತಮ್ಮ ಮಕ್ಕಳನ್ನು ಕಳಿಸಬಾರದು ಮನವಿ ಎಂದು ಮಾಡಿಕೊ ಳ್ಳುವುದು ಸಹ ಇನ್ನು ಅನಿವಾ ರ್ಯವಾಗಲಿದೆ ಎಂದು ಆಟೊ ಚಾಲಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಆಟೋಗಳನ್ನು ವಶಕ್ಕೆ ಪಡೆದ ನಂತರ ಎಲ್ಲಾ ಆಟೋ ಚಾಲಕರು ಸಂಚಾರಿ ಪೊಲೀಸ್ ಠಾಣೆಗೆ ಜಮಾಯಿಸಿದ್ದು ಎಷ್ಟೇ ಮನವಿ ಮಾಡಿದರೂ ನೀಡದೇ 500 ರೂ ದಂಡ ಪಾವತಿಸಿಕೊಂಡು ಬಳಿಕ ಆಟೋಗಳನ್ನು ನೀಡಲಾಯಿತು.
'ಆಟೊ ಚಾಲಕರು ಕಡ್ಡಾಯವಾಗಿ ಪರ್ಮಿಟ್ ಪಡೆದುಕೊ-ಳ್ಳಬೇಕು. ಪ್ರಯಾಣಿಕರ ಹಿತದೃಷ್ಟಿಯಿಂದ ಇನ್ಸುರೆನ್ಸ್ ಮಾಡಬೇಕು. ಕೆಲವರು ಮಾಲೀಕತ್ವ ವರ್ಗಾವಣೆ ಮಾಡಿಕೊಂಡಿಲ್ಲ. ಪರವಾನಗಿ ಸಹ ಪಡೆದುಕೊಂಡಿಲ್ಲ. ಲೈಸನ್ಸ್ ಇಲ್ಲದೇ ಆಟೊ ರಿಕ್ಷಾ ಚಲಾಯಿಸುವುದು ನಿಯ-ಮಬಾಹಿರವಾಗಿದೆ' ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಇನ್‌ಸ್ಪೆಕ್ಟರ್ ಪ್ರವೀಣ ಹೇಳಿದ್ದಾರೆ.