ರಾಯಚೂರು | ಫೆ.17ರಿಂದ 24ರವರೆಗೆ ವಾಹನ ಸಂಚಾರ ಗಣತಿ
Photo credit: PTI
ರಾಯಚೂರು : ಲೋಕೋಪಯೋಗಿ ಇಲಾಖೆಯಿಂದ ಪ್ರತಿ ವರ್ಷಕ್ಕೊಮ್ಮೆ ಎರಡು ದಿನ ಮತ್ತು ಐದು ವರ್ಷಗಳಿಗೊಮ್ಮೆ ಏಳು ದಿನಗಳ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ವಾಹನ ಸಂಚಾರ ಗಣತಿ ಕಾರ್ಯವನ್ನು ಫೆ.17ರಿಂದ 24ರವರೆಗೆ ಹಮ್ಮಿಕೊಳ್ಳಲಾಗಿದೆ.
ಈ ಗಣತಿಯಿಂದ ಸಂಗ್ರಹಿಸಿದ ಮಾಹಿತಿಯಿಂದ ಸರ್ಕಾರಕ್ಕೆ ರಸ್ತೆಗಳ ಸಂಚಾರ ಸಾಂದ್ರತೆ, ಸಂಚಾರ ತೀವ್ರತೆ ಕಂಡು ಹಿಡಿಯುವುದಕ್ಕೆ ರಸ್ತೆಗಳ ಆಗಲಳತೆ ನಿರ್ಧರಿಸಲು ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ರಸ್ತೆಗಳ ಸ್ಥಿತಿಗತಿ ಸುಧಾರಿಸಲು ಅನುಕೂಲವಾಗುತ್ತದೆ. ರಸ್ತೆ ಸಂಚಾರ ಗಣತಿ ಕಾರ್ಯವನ್ನು ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಸ್ಥಾಪಿಸಲಾಗುವ ಕೇಮರಾ ಬೇಸಡ್ ಗಣತಿ ಕೇಂದ್ರಗಳಲ್ಲಿ ಕೈಗೊಳ್ಳಲಾಗುತ್ತದೆ.
ಗಣತಿ ಕೇಂದ್ರಗಳಿದ್ದಲ್ಲಿ ವಾಹನ ರಸ್ತೆ ಸಂಚಾರ ಗಣತಿ ಕೇಂದ್ರವಿದೆ. ತಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ ಎಂದು ಸೂಚನಾ ಫಲಕಗಳನ್ನು ತೂಗುಬಿಟ್ಟಿರುತ್ತಾರೆ. ಎಲ್ಲಾ ವಾಹನ ಚಾಲಕರು ತಮ್ಮ ವಾಹನವನ್ನು ನಿಧಾನವಾಗಿ ಸಾಗಿಸಿಕೊಂಡು ಮುಂದೆ ಸಾಗಿಸಬೇಕೆಂದು ರಾಯಚೂರಿನ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.