ರಾಯಚೂರು: ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ವೆಂಕಟೇಶ ಗಲಗ ಅವರನ್ನು ಏಕಾಎಕಿ ವರ್ಗಾವಣೆ ಮಾಡಿರುವುದನ್ನು ರದ್ದುಗೊಳಿಸಬೇಕು ಎಂದು ಮಹರ್ಷಿ ವಾಲ್ಮೀಕಿ ನಾಯಕರ ಮಹಾವೇದಿಕೆ ಮುಖಂಡ ಶಿವಗೇನಿ ನಾಯಕ ಜಿಂಕಲ್ ಹೇಳಿದರು.

ರವಿವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಶಿವಗೇನಿ ನಾಯಕ, ವೆಂಕಟೇಶ ಗಲಗ ಅವರು ಹುದ್ದೆ ವಹಿಸಿಕೊಂಡ 13 ತಿಂಗಳಲ್ಲಿಯೇ ವರ್ಗಾವಣೆ ಮಾಡಲಾಗಿದೆ. ವಾಲ್ಮೀಕಿ ನಾಯಕ ಸಮೂದಾಯದ  ಜನರ ಮೇಲೆ ಜಿಲ್ಲೆಯಲ್ಲಿ ದೌರ್ಜನ್ಯ, ದಬ್ಬಾಳಿಕೆ ಮುಂದುವರಿದಿದೆ. ಜಿಲ್ಲೆಯಲ್ಲಿ ನಾಲ್ಕು ಜನ ಶಾಸಕರು, ಒಬ್ಬರು ಸಂಸದರೂ ಸೇರಿದಂತೆ ಸಮಾಜದವರಿದ್ದರೂ ಸಮಾಜದ ಅಧಿಕಾರಿಗಳನ್ನು ಅನಗತ್ಯವಾಗಿ ವರ್ಗಾವಣೆ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ್‌ ಜಾರಕಿಹೊಳೆಯವರು ವರ್ಗಾವಣೆ ರದ್ದುಗೊಳಿಸಬೇಕು. ಯಾವ ಶಕ್ತಿಗಳ ವರ್ಗಾವಣೆ ಕಾರಣರಾಗಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕೆಂದರು.

ಅರಕೇರಾ, ಸಿರವಾರ, ದೇವದುರ್ಗ, ಮಾನವಿ ಸೇರಿದಂತೆ ತಾಲೂಕು ಪಂಚಾಯ್ತಿಗಳಲ್ಲಿ ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಅನೇಕ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪವಿದೆ. ಯಾರ ವಿರುದ್ದವೂ ಕ್ರಮವೇ ಆಗಿಲ್ಲ.  ದಕ್ಷ ಅಧಿಕಾರಿಗಳ ವಿರುದ್ದ ಸುಳ್ಳು ಆರೋಪ ಮಾಡಿ ವರ್ಗಾವಣೆ ಮಾಡಲಾಗುತ್ತಿದೆ. ಕೂಡಲೇ ವರ್ಗಾವಣೆ ರದ್ದುಗೊಳಿಸದಿದ್ದಲ್ಲಿ  ಜಿಲ್ಲಾ ಮತ್ತು ತಾಲೂಕು ಬಂದ್ ನಡೆಸಿ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ವೆಂಕಟೇಶ ಪಾಟೀಲ್ ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor