ರಾಯಚೂರು | ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಸಿದ್ಧತೆಗಾಗಿ ಮತದಾರರ ಮಾಹಿತಿ ಸೌಲಭ್ಯ ಕೇಂದ್ರ ಸ್ಥಾಪನೆ
ರಾಯಚೂರು : ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರ ಮತದಾರರ ಪಟ್ಟಿಯನ್ನು ಸಿದ್ದಪಡಿಸುವ ಸಂಬಂಧ ಮತದಾರರ ಮಾಹಿತಿ ಸೌಲಭ್ಯ ಕೇಂದ್ರ ಸ್ಥಾಪಿಸಲಾಗಿದೆ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ತಿಳಿಸಿದ್ದಾರೆ.
ಮತದಾರರು ತಮ್ಮ ನೋಂದಣಿ, ಮತಗಟ್ಟೆ ಹಾಗೂ ಇತರೆ ಮಾಹಿತಿ ಸಂಬಂಧ ಈ ಮುಂದಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ರಾಯಚೂರು ಜಿಲ್ಲೆಗೆ ಸಂಬಂಧಿಸಿದ ಮಾಹಿತಿ ಸೌಲಭ್ಯ ಕೇಂದ್ರವನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯ ರಾಯಚೂರು 08532-228551, ರಾಯಚೂರು ತಾಲೂಕಿನ ಮಾಹಿತಿ ಸೌಲಭ್ಯ ಕೇಂದ್ರವನ್ನು ತಹಶೀಲ್ದಾರ್ ಕಚೇರಿ ದೂ. 08532-200772, ಮಾನವಿ ಹಾಗೂ ಸಿರವಾರ ತಾಲೂಕು ವ್ಯಾಪ್ತಿಯ ಮಾಹಿತಿ ಸೌಲಭ್ಯ ಕೇಂದ್ರವನ್ನು ಮಾನವಿ ತಹಶೀಲ್ ಕಚೇರಿಯಲ್ಲಿ ದೂ:08538-220239, ದೇವದುರ್ಗ ಹಾಗೂ ಅರಕೇರಾ ತಾಲೂಕು ವ್ಯಾಪ್ತಿಯ ಮಾಹಿತಿ ಸೌಲಭ್ಯ ಕೇಂದ್ರವನ್ನು ದೇವದುರ್ಗ ತಹಶೀಲ್ ಕಚೇರಿಯಲ್ಲಿ ದೂ. 08531-200117, ಲಿಂಗಸೂಗೂರು ತಾಲೂಕು ವ್ಯಾಪ್ತಿಯ ಮಾಹಿತಿ ಸೌಲಭ್ಯ ಕೇಂದ್ರವನ್ನು ದೇವದುರ್ಗ ತಹಸೀಲ್ ಕಚೇರಿಯಲ್ಲಿ ದೂ: 08537-275247, ಸಿಂಧನೂರು ತಾಲೂಕು ವ್ಯಾಪ್ತಿಯ ಮಾಹಿತಿ ಸೌಲಭ್ಯ ಕೇಂದ್ರವನ್ನು ಸಿಂಧನೂರ ತಹಶೀಲ್ ಕಚೇರಿಯಲ್ಲಿ ದೂ: 08535-220151 ಮತ್ತು ಮಸ್ಕಿ ತಾಲೂಕು ವ್ಯಾಪ್ತಿಯ ಮಾಹಿತಿ ಸೌಲಭ್ಯ ಕೇಂದ್ರವನ್ನು ಮಸ್ಕಿ ತಹಶೀಲ್ ಕಚೇರಿಯಲ್ಲಿ ದೂ: 08537-295504ಸ್ಥಾಪನೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತ ಚುನಾವಣಾ ಆಯೋಗವು ಆ.12, 2025ರ ಪತ್ರದನ್ವಯ ನ.11ರ 2026ಕ್ಕೆ ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಸದಸ್ಯರ ಪದಾವಧಿಯು ಮುಕ್ತಾಗೊಳ್ಳಲಿದ್ದು, ನ1, 2025ಕ್ಕೆ ಅನ್ವಯಿಸುವಂತೆ ಮತದಾರರ ಪಟ್ಟಿಯನ್ನು ಸಿದ್ದಪಡಿಸಲು ವೇಳಾಪಟ್ಟಿಯನ್ನು ಹೊರಡಿಸಿರುತ್ತದೆ. ಅದರನ್ವಯ ನ.25, 2025ರಂದು ಕರಡು ಮತದಾರರ ಪಟ್ಟಿ ಪ್ರಚುರಪಡಿಸಿ ದಿನಾಂಕ ನ25, 2025 ರಿಂದ ಡಿ.10, 2025ರವರೆಗೆ ಆಕ್ಷೇಪಣೆಗಳನ್ನು ಅಹ್ವಾನಿಸಿ ಡಿ.30, 2025ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಚೂರಪಡಿಸಲು ವೇಳಾಪಟ್ಟಿಯನ್ನು ಹೊರಡಿಸಿ ನಿರ್ದೇಶಿಸಿರುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.