×
Ad

ರಾಯಚೂರು | ಕೃಷಿ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ

Update: 2025-06-06 17:21 IST

ರಾಯಚೂರು : “ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ಮತ್ತು ಹಸಿರು ನಾಳೆಯ ಕಡೆಗೆ” ಎಂಬ ಶೀರ್ಷಿಕೆಯಡಿ ನಗರದಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಅರಣ್ಯ ಇಲಾಖೆ ಪ್ರಾದೇಶಿಕ ವಿಭಾಗ ಇವರ ಸಹಯೋಗದೊಂದಿಗೆ ಜೂ.5ರಂದು ವಿಶ್ವ ವಿದ್ಯಾಲಯದ ಆವರಣದಲ್ಲಿ ಸುಸ್ಥಿರ ಜೀವನವನ್ನು ಪ್ರೇರೇಪಿಸಲು ದೊಡ್ಡ ಪ್ರಮಾಣದ ಸಸಿಗಳನ್ನು ನೆಡುವ ಅಭಿಯಾನ, ವಿಶ್ವ ಪರಿಸರ ದಿನಾಚರಣೆ ಮತ್ತು ಹಸಿರು ಪದವಿ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು.

ಕೃಷಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ.ಶಹಬಾಜ್ ನೂರಿ ಅವರು ಸ್ಥಾಪಿಸಿದ “ಪ್ಯಾರೆಸ್ಟ್ ವುಡ್ ಮ್ಯೂಸಿಯಂ ಅನ್ನು ಇದೆ ವೇಳೆ ಗೌರವಾನ್ವಿತ ಕುಲಪತಿಗಳು ಉದ್ಘಾಟಿಸಿದರು. ಇದೆ ವೇಳೆ ವಾಣಿಜ್ಯಕ್ಕೆ ಸಂಬಂಧಿಸಿದಂತೆ ಪ್ರಮುಖವಾದ 36 ಮರದ ಮಾದರಿಗಳು, 42 ಅರಣ್ಯ ಬೀಜ ಮಾದರಿಗಳು, ಪರಿಸರ ಸ್ನೇಹಿ ವಿವಿಧ ಮರ ಆಧಾರಿತ ಉತ್ಪನಗಳ ಪ್ರದರ್ಶನ ನಡೆಯಿತು.

ಕುಲಪತಿಗಳಾದ ಡಾ.ಎಂ.ಹನುಮಂತಪ್ಪ ಅವರು ಮಾತನಾಡಿ, ಏಕ ಬಳಕೆಯ ಪ್ಲಾಸ್ಟಿಕ್‌ ಗಳನ್ನು ತೆಗೆದು ಹಾಕುವ ತುರ್ತು ಅಗತ್ಯವಿದೆ. ಜೀವ ವೈವಿಧ್ಯತೆ, ಪರಿಸರ ಉಸ್ತುವಾರಿ ಮತ್ತು ಹವಾಮಾನ ಸ್ಥಿತಿ ಸ್ಥಾಪಕತ್ವಕ್ಕೆ ವಿಶ್ವವಿದ್ಯಾಯದ ಬದ್ದತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯು ಪದವಿ ಪಡೆಯುವರೆಗೂ ಒಂದು ಸಸಿಯನ್ನು ದತ್ತು ತೆಗೆದುಕೊಂಡು ಅದನ್ನು ಪಾಲನೆ ಪೋಷಣೆ ಸಂರಕ್ಷಣೆಯನ್ನು ನೋಡಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಕುಲಸಚಿವರಾಧ ಡಾ.ದುರ್ಗೇಶ್, ಡೀನ್ ಡಾ.ನಾರಾಯಣರಾವ್ ಕೆ., ಕೃಷಿ ಎಂಜಿನಿಯರಿಂಗ್ ಡೀನ್ ಡಾ.ಎಂ.ಎಸ್. ಅಯ್ಯನಗೌಡರು, ಪರಿಸರ ವಿಜ್ಞಾನ ಮತ್ತು ಅರಣ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಬಸವರಾಜ ಹಾಗೂ ವಿಶ್ವವಿದ್ಯಾಲಯದ ಹಲವಾರು ಪ್ರಮುಖ ಅಧಿಕಾರಿಗಳು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ-ಶಿಕ್ಷೇತರ ಸಿಬ್ವಂದಿ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News