ರಾಯಚೂರು: ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತಿ ಬಾಬು ಭಂಡಾರಿಗಲ್, ಪತ್ರಕರ್ತ ಶಿವಮೂರ್ತಿ ಆಯ್ಕೆ
Update: 2025-10-31 11:19 IST
ರಾಯಚೂರು: ಕನ್ನಡ ರಾಜ್ಯೋತ್ಸವ ಆಚರಣೆಯ ಸಂಬಂಧ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವ ಸಾಧಕರಿಗೆ ನೀಡುವ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ.
ಕನ್ನಡರಾಜ್ಯೋತ್ಸವ ಆಚರಣೆಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಪ್ರಕಟಿಸಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಬಾಬು ಬಂಡಾರಿಗಲ್, ಪತ್ರಿಕೋದ್ಯಮದಲ್ಲಿ ಶಿವಮೂರ್ತಿ ಹಿರೇಮಠ, ವೈದ್ಯಕೀಯ ಕ್ಷೇತ್ರದಲ್ಲಿ ಓಪೆಕ್ ಆಸ್ಪತ್ರೆಯ ವಿಶೇಷ ಅಧಿಕಾರಿ ಡಾ. ರಮೇಶ ಬಿ.ಸಾಗರ್, ಸಂಸ್ಥೆಗಳ ವಿಭಾಗದಲ್ಲಿ ಸುರಕ್ಷಾ ಟ್ರಸ್ಟ್, ಕಲಾ ಸಂಕುಲ ಸಂಸ್ಥೆ, ಸಮಾಜ ಸೇವಾ ಕ್ಷೇತ್ರದಲ್ಲಿ ಚಂದ್ರಶೇಖರ ಪಾಟೀಲ್ ಮಿರ್ಜಾಪೂರ, ಕೃಷಿ ಕ್ಷೇತ್ರದಲ್ಲಿ ಹನುಮರೆಡ್ಡಿ ಕಲಾ ಕ್ಷೇತ್ರದಲ್ಲಿ ನಾರಾಯಣಪ್ಪ ಮಾಡಸಿರವಾರ ಅವರಿಗೆ ಪ್ರಶಸ್ತಿ ಘೋಷಿಸಲಾಗಿ ದೆ.
ಸಿಂಧನೂರಿನ ನಾರಾಯಣಪ್ಪ ಮಾಡಸಿರವಾರ ಬಿಟ್ಟರೆ ಉಳಿದೆಲ್ಲ ಪ್ರಶಸ್ತಿಗೆ ರಾಯಚೂರಿನವರೇ ಆಯ್ಕೆಯಾಗಿರುವುದು ವಿಶೇಷ.