ಮುದಗಲ್: ಬೈಕ್ ತಡೆದು ನಾಲ್ಕು ಲಕ್ಷ ರೂ. ದರೋಡೆ
Update: 2025-10-28 21:38 IST
ಸಾಂದರ್ಭಿಕ ಚಿತ್ರ (Image by jcomp on Freepik)
ಮುದಗಲ್: ದುಷ್ಕರ್ಮಿಗಳ ತಂಡವೊಂದು ಬೈಕ್ ಸವಾರರನ್ನು ತಡೆದು ನಾಲ್ಕು ಲಕ್ಷ ರೂ. ದರೋಡೆ ನಡೆಸಿರುವ ಘಟನೆ ಇಲ್ಲಿಗೆ ಸಮೀಪದ ಮಟ್ಟೂರು ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ಹಣ ಕಳೆದುಕೊಂಡವರು ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ. ಮುದಗಲ್ ಪಟ್ಟಣದ ಬ್ಯಾಂಕ್‍ನಿಂದ ಸಂಜೆ ನಾಲ್ಕು ಲಕ್ಷ ಹಣವನ್ನು ಡ್ರಾ ಮಾಡಿಕೊಂಡು ಬೈಕ್ ನಲ್ಲಿ ಮುದಗಲ್‍ನಿಂದ ಮಟ್ಟೂರಿಗೆ ಮಲ್ಲಿಕಾರ್ಜುನ ಹಾಗೂ ಪಂಪಣ್ಣ ಎಂಬುವವರು ತೆರಳುತ್ತಿದ್ದರು.
ಮಟ್ಟೂರು ಸಮೀಪದ ನಿರ್ಜನ ಪ್ರದೇಶದಲ್ಲಿ ಬೈಕ್ ತಡೆದ ದುಷ್ಕರ್ಮಿಗಳು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನಾ ಸ್ಥಳಕ್ಕೆ ಮುದಗಲ್ ಠಾಣೆಯ ಸಿಪಿಐ ಹಾಗೂ ಪಿಎಸ್‍ಐ ವೆಂಕಟೇಶ ಮಾಡಗಿರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.