ರಾಯಚೂರು | ಪಾಲಿಕೆಯಿಂದ ಕಪ್ಪು ಪಟ್ಟಿಯಲ್ಲಿರುವ ಕಂಪನಿಗೆ ಹೊರಗುತ್ತಿಗೆ ನೇಮಾಕಾತಿಗೆ ಟೆಂಡರ್: ವಿರೋಧ
ರಾಯಚೂರು: ಮಹಾನಗರ ಪಾಲಿಕೆಯಿಂದ 136 ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಕಪ್ಪು ಪಟ್ಟಿಗೆ ಸೇರಿದ ಕಂಪೆನಿಗೆ ಟೆಂಡರ್ ನೀಡಿ ಅಕ್ರಮ ಎಸಲಾಗಿದೆ ಎಂದು ಮಾಹಿತಿ ಹಕ್ಕು ವೇದಿಕೆ ಸದಸ್ಯ ರಾಜು ಪಟ್ಟಿ ಆರೋಪಿಸಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಶಾಪ್ ಸಂಸ್ತೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಹೊರಡಿಸಲಾದ ಆದೇಶದೊಂದಿಗೆ ಮಹಾನಗರ ಪಾಲಿಕೆ ದೂರು ನೀಡಲಾಗಿತ್ತು. ಆದರೂ ಪರಿಗಣಿಸದೇ ಟೆಂಡರ್ ನಿಯಮಗಳನ್ನು ಉಲ್ಲಂಘಿಸಿ ಆದೇಶ ನೀಡಿರುವದು ಹಲವಾರು ಸಂಶಯಗಳಿಗೆ ಕಾರಣವಾಗಿದೆ ಎಂದರು.
2025 ಜೂ.17 ರಂದು ಪಾಲಿಕೆಯಿಂದ ಹೊರಗುತ್ತಿಗೆ ಇ-ಟೆಂಡರ್ ಅಹ್ವಾನಿಸಲಾಗಿತ್ತು. ಕಪ್ಪು ಪಟ್ಟಿಗೆ ಸೇರಿದ ಸಂಸ್ಥೇಯನ್ನು ಬಿಡ್‍ನಿಂದ ತಿರಸ್ಕರಿಸದೇ ತಾಂತ್ರಿಕ ಮತ್ತು ಆರ್ಥಿಕಬಿಡ್ ಮೌಲ್ಯಮಾಪನ ಮಾಡಿ ಜು.14 ರಂದು ಗುತ್ತಿಗೆ ಒಪ್ಪಂದ ಸ್ವೀಕಾರ ಪತ್ರ ನೀಡಲಾಗಿದೆ. ಒಪ್ಪಂದದಂತೆ 20 ದಿನದಲ್ಲಿ ಗುತ್ತಿಗೆ ಒಪ್ಪಂದ ಕಾರ್ಯಗತಗೊಳಿಸಬೇಕೆಂಬ ನಿಯಮವಿದ್ದರೂ ಆರ್ಥಿಕ ಇಲಾಖೆ ಆದೇಶಗಳನ್ನು ಪಾಲಿಸದೇ 120 ವಿಳಂಬವಾಗಿ ಆದೇಶ ನೀಡಲಾಗಿದೆ. ಕಂದಾಯ ಇಲಾಖೆ ಮೂರು ವರ್ಷಗಳ ಅವಧಿಗೆ ಕಪ್ಪು ಪಟ್ಟಿಗೆ ಸೇರಿಸಿ ಯಾವುದೇ ಟೆಂಡರ್ ಭಾಗವಹಿಸದಂತೆ ನಿರ್ಬಂದಿಸಲಾಗಿದೆ ಎಂದು ಅವರು ಆರೋಪಿಸದರು.
ಎಸ್ಸಿಎಸ್ಟಿ, ಹಿಂದುಳಿದವರ್ಗ ಹಾಗೂ ಮಹಿಳಾ ಮೀಸಲಾತಿ ನಿಯಮಗಳನ್ನು ಅನುಸರಿಸಿಲ್ಲ. ಕೂಡಲೇ ಟೆಂಡರ್ ರದ್ದುಗೊಳಿಸಿ ಹೊಸ ಟೆಂಡರ್ ಕರೆಯಬೇಕೆಂದು ಜಿಲ್ಲಾ ಉಸ್ತುವಾರಿ ಹಾಗೂ ಆರ್ಥಿಕ ಇಲಾಖೆ ಕಾರ್ಯದರ್ಶಿಗಳಿಗೆ ದೂರು ನೀಡುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾಹಿತಿ ಹಕ್ಕು ವೇದಿಕೆ ಅಧ್ಯಕ್ಷ ಸಬ್ಬಲಿಸಾಬ್, ಮಹೇಶ ಕುಮಾರ, ಬಸವರಾಜ ಹೊಸೂರು, ವೆಂಕಟರಾಮ್‍ರೆಡ್ಡಿ ಇದ್ದರು.