×
Ad

ಸೋಮೇಶ್ವರ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ದಂಪತಿ: ಪತ್ನಿಗೆ ಗೆಲುವು

Update: 2023-12-30 13:59 IST

ಉಳ್ಳಾಲ: ಸೋಮೇಶ್ವರ ಪುರಸಭೆಯ 3ನೇ ವಾರ್ಡ್ ಲಕ್ಷ್ಮಿಗುಡ್ಡೆ ಪ್ರಕಾಶ್ ನಗರದಲ್ಲಿ ಸಹೋದರಿಯರ ನಡುವೆ ನಡೆದ ಸ್ಪರ್ಧೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ತಂಗಿ ವಿಜಯಿಯಾದರೆ  ಕಾಂಗ್ರೆಸ್ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಸಿಪಿಐಎಂ ಅಭ್ಯರ್ಥಿ ಅಕ್ಕನಿಗೆ ಸೋಲಾಗಿದೆ.

ಬಿಜೆಪಿಯ ಸಪ್ನ ಶೆಟ್ಟಿ 340 ಮತಗಳನ್ನು ಪಡೆದು ವಿಜಯಿಯಾದರೆ ಅವರ ಸಹೋದರಿ ಸಿಪಿಐಎಂ ಅಭ್ಯರ್ಥಿ ಸೌಮ್ಯಾ ಎಸ್. ಪಿಲಾರ್ 153 ಮತಗಳನ್ನು ಪಡೆದು 183 ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಒಂದನೇ ಮುಂಡೋಳಿ ವಾರ್ಡ್ ಮತ್ತು 2ನೇ ಪ್ರಕಾಶ್ ನಗರ ವಾರ್ಡ್ ನಲ್ಲಿ ಸ್ಪರ್ಧಿಸಿದ ದಂಪತಿಗಳಲ್ಲಿ, ಪತ್ನಿ ವಿಜಯಿಯಾಗಿದ್ದು, ಪತಿ ಸೋತಿದ್ದಾರೆ.  ಒಂದನೇ ಮುಂಡೋಳಿ ವಾರ್ಡ್ ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆಮಿನಾ ಬಶೀರ್, ಬಿಜೆಪಿಯ ಅಭ್ಯರ್ಥಿ ಸುನಿತಾ ರಾಜೇಶ್ ಎದುರು 271 ಮತಗಳ ಅಂತರದಲ್ಲಿ ವಿಜೇತ ರಾಗಿದ್ದಾರೆ.

ಆಮಿನಾ ಅವರ ಪತಿ 2ನೇ ಪ್ರಕಾಶ್ ನಗರ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ (ಸೋಮೇಶ್ವರ ಪಂಚಾಯತ್ ನ ಮಾಜಿ ಸದಸ್ಯ) ಬಶೀರ್ ಮುಂಡೋಳಿ ಬಿಜೆಪಿಯ ಅಭ್ಯರ್ಥಿ ಯಶವಂತ್ ಪ್ರಕಾಶ್ ನಗರ ಅವರ ಎದುರು ಒಂದು ಮತದ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.

  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News