×
Ad

ಸೂಪರ್‍ಬೆಟ್ ಕ್ಲಾಸಿಕ್ ಚೆಸ್ ಪಂದ್ಯಾವಳಿ : ಗುಕೇಶ್ ವಿರುದ್ಧಡ್ರಾ ಮಾಡಿದ ಪ್ರಜ್ಞಾನಂದ

Update: 2024-06-29 21:47 IST

PC : X 

ಬುಕಾರೆಸ್ಟ್ (ರೊಮೇನಿಯ): ರೊಮೇನಿಯ ಬುಕಾರೆಸ್ಟ್‍ನಲ್ಲಿ ನಡೆಯುತ್ತಿರುವ ಸೂಪರ್‍ಬೆಟ್ ಕ್ಲಾಸಿಕ್ ಚೆಸ್ ಪಂದ್ಯಾವಳಿಯಲ್ಲಿ ಭಾರತದಗ್ರಾಂಡ್‍ಮಾಸ್ಟರ್‍ಆರ್. ಪ್ರಜ್ಞಾನಂದಜಂಟಿ ಮುನ್ನಡೆ ಪಡೆಯುವಅವಕಾಶದಿಂದ ವಂಚಿತರಾಗಿದ್ದಾರೆ. ಅವರು ಮೂರನೇ ಸುತ್ತಿನಲ್ಲಿತನ್ನದೇದೇಶದ ಡಿ. ಗುಕೇಶ್ ವಿರುದ್ಧದ ಪಂದ್ಯದಲ್ಲಿಡ್ರಾ ಮಾಡಿಕೊಂಡಿದ್ದಾರೆ.

ಶನಿವಾರ ಪ್ರಜ್ಞಾನಂದರಅದೃಷ್ಟಚೆನ್ನಾಗಿರಲಿಲ್ಲ. ಬೇರೆಯಾವುದೇ ಸಂದರ್ಭದಲ್ಲಿಯಾದರೂ ಪಂದ್ಯವನ್ನುಗೆಲ್ಲುವಉತ್ತಮಅವಕಾಶವನ್ನುಅವರು ಹೊಂದಿದ್ದರು. ಇದರೊಂದಿಗೆಜಂಟಿ ಮುನ್ನಡೆಗಾರನಾಗುವಅವಕಾಶವನ್ನು ಕಳೆದುಕೊಂಡರು. ಶನಿವಾರಅದೃಷ್ಟಗುಕೇಶ್‍ಗೆ ಒಲಿಯಿತು. ಪಂದ್ಯವನ್ನುಡ್ರಾ ಮಾಡಿಕೊಳ್ಳುವಲ್ಲಿ ಅವರು ಯಶಸ್ವಿಯಾದರು.

ಮೂರು ದಿನಗಳಲ್ಲಿ ಮೊದಲ ಬಾರಿಗೆ, ಶನಿವಾರಎಲ್ಲಾಐದು ಪಂದ್ಯಗಳು ಡ್ರಾದಲ್ಲಿ ಮುಕ್ತಾಯಗೊಂಡವು. ಹಾಗಾಗಿ, ಆಟಗಾರರ ಸ್ಥಾನಗಳಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಅಗ್ರ ಸ್ಥಾನದಲ್ಲಿಗುಕೇಶ್ ಮತ್ತುಅಮೆರಿಕದ ಫೆಬಿಯಾನೊಕರುವಾನ ಮುಂದುವರಿದಿದ್ದಾರೆ. ಫೆಬಿಯಾನೊಉಝ್ಬೆಕಿಸ್ತಾನದ ನೊಡಿರ್ಬೆಕ್‍ಅಬ್ದುಸಟ್ರೋವ್ ವಿರುದ್ಧದ ಪಂದ್ಯವನ್ನು ಡ್ರಾಗೊಳಿಸಿದರು.

ಜಂಟಿ ಮುನ್ನಡೆಯಲ್ಲಿರುವಇಬ್ಬರುಆಟಗಾರರುತಲಾಎರಡು ಅಂಕಗಳನ್ನು ಹೊಂದಿದ್ದಾರೆ. ತಲಾ 1.5 ಅಂಕಗಳನ್ನು ಹೊಂದಿರುವ ವಚಿಯರ್ ಲಗ್ರಾವ್, ಪ್ರಜ್ಞಾನಂದ, ಅಲಿರೆಝ, ವೆಸ್ಲಿ ಸೊ, ಗಿರಿ ಮತ್ತು ನೆಪೊಮ್ನಿಯಾಟ್ಕಿ ಮೂರನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಇನ್ನುಆರು ಸುತ್ತಿನ ಪಂದ್ಯಗಳು ನಡೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News