ಕೋಸ್ಟರಿಕವನ್ನು ಸೋಲಿಸಿ ಕೊಲಂಬಿಯ ಕ್ವಾರ್ಟರ್‌ಫೈನಲ್‌ಗೆ
PC : NDTV
ಫೀನಿಕ್ಸ್ (ಆ್ಯರಿಝೋನ); ಕೋಪ ಅಮೆರಿಕಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶುಕ್ರವಾರಕೋಸ್ಟರಿಕವನ್ನು 3-0 ಗೋಲುಗಳಿಂದ ಸೋಲಿಸಿದ ಕೊಲಂಬಿಯಕ್ವಾರ್ಟರ್‍ಫೈನಲ್‍ತಲುಪಿದೆ.
ಆ್ಯರಿಝೋನದ ಫೀನಿಕ್ಸ್‍ಯುನಿವರ್ಸಿಟಿ ಸ್ಟೇಡಿಯಮ್‍ನಲ್ಲಿ ನಡೆದ ಪಂದ್ಯದಲ್ಲಿಕೊಲಂಬಿಯದ ಪರವಾಗಿ ಲೂಯಿಝ್‍ಡಿಯಾಝ್, ಡೇವಿನ್ಸನ್ ಸ್ಯಾಂಚೇಝ್ ಮತ್ತುಜಾನ್‍ಕೊರ್ಡೊಬ ಗೋಲುಗಳನ್ನು ಬಾರಿಸಿದರು. ಈ ಗೆಲುವಿನೊಂದಿಗೆ ಕೊಲಂಬಿಯತಂಡವು ಮೂರು ಅಂಕಗಳನ್ನು ಗಳಿಸಿತು. ಇದರೊಂದಿಗೆ ಡಿ ಗುಂಪಿನಲ್ಲಿಕೊಲಂಬಿಯತಂಡವುಅಗ್ರಎರಡರಲ್ಲಿ ಸ್ಥಾನವನ್ನು ಪಡೆಯುವುದುಖಚಿತವಾಗಿದೆ.
ಮಂಗಳವಾರ ನಡೆಯಲಿರುವತನ್ನ ಗುಂಪಿನ ಕೊನೆಯ ಪಂದ್ಯದಲ್ಲಿಕೊಲಂಬಿಯವು ಬ್ರೆಝಿಲ್‍ತಂಡವನ್ನುಎದುರಿಸಲಿದೆ. ಈ ಪಂದ್ಯದಿಂದಅದಕ್ಕೆ ಕನಿಷ್ಠ ಒಂದುಅಂಕವನ್ನು ಗಳಿಸಲು ಸಾಧ್ಯವಾದರೆಅದು ಗುಂಪಿನ ಅಗ್ರಸ್ಥಾನಿಯಾಗುತ್ತದೆ.
ಕೊಲಂಬಿಯ ಈಗ ನಿರಂತರವಾಗಿ 25 ಪಂದ್ಯಗಳಲ್ಲಿ ಗೆದ್ದುಅಜೇಯಅಭಿಯಾನವನ್ನು ಮುಂದುವರಿಸಿದೆ. ಕೋಚ್ ನೆಸ್ಟರ್ ಲೊರೆಂಝೊ ನೇತೃತ್ವದಕೊಲಂಬಿಯತಂಡವುಅತ್ಯಂತ ಸಂಘಟಿತತಂಡವಾಗಿರೂಪುಗೊಂಡಿದೆ. ಅದು 2022 ಫೆಬ್ರವರಿಯಲ್ಲಿಅರ್ಜೆಂಟೀನ ವಿರುದ್ಧ ಸೋತ ಬಳಿಕ ಇನ್ನೊಂದು ಸೋಲು ಕಂಡಿಲ್ಲ.
ಪರಾಗ್ವೆಗೆ 4-0 ಅಂತರದ ಸೋಲುಣಿಸಿದ ಬ್ರೆಝಿಲ್
ಶುಕ್ರವಾರ ನಡೆದಇನ್ನೊಂದು ಡಿ ಗುಂಪಿನ ಪಂದ್ಯದಲ್ಲಿ ಬ್ರೆಝಿಲ್‍ತಂಡವು ಪರಾಗ್ವೆತಂಡವನ್ನು 4-1 ಗೋಲುಗಳ ಅಂತರದಿಂದ ಸೋಲಿಸಿದೆ.
ಲಾಸ್ ವೇಗಸ್‍ನಅಲೆಜಿಯಂಟ್ ಸ್ಟೇಡಿಯಮ್‍ನಲ್ಲಿ ನಡೆದ ಪಂದ್ಯದಲ್ಲಿ ಬ್ರೆಝಿಲ್ ಮಧ್ಯಂತರದ ವೇಳೆಗೆ 3-0 ಅಂತರದಿಂದ ಮುಂದಿತ್ತು.
ಇದಕ್ಕೂ ಮೊದಲು, 31ನೇ ನಿಮಿಷದಲ್ಲಿ ಗೋಲು ಗಳಿಸುವ ಸುವರ್ಣಅವಕಾಶವೊಂದನ್ನು ಬ್ರೆಝಿಲ್ ಕಳೆದುಕೊಂಡಿತ್ತು. ಪರಾಗ್ವೆಯಆ್ಯಡ್ರಿಯನ್‍ಕ್ಯೂಬಸ್ ಪೆನಾಲ್ಟಿ ಪ್ರದೇದಲ್ಲಿ ಫೌಲ್ ಮಾಡಿದರು. ಆಗ ಬ್ರೆಝಿಲ್‍ಗೆ ಪೆನಾಲ್ಟಿ ನೀಡಲಾಯಿತು. ಆದರೆ ಲೂಕ್ ಪಕೇಟರಿಗೆಅದನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಕ್ಯೂಬಸ್‍ಗೆ ಬಳಿಕ 81ನೇ ನಿಮಿಷದಲ್ಲಿ ಕೆಂಪು ಕಾರ್ಡ್ ನೀಡಲಾಯಿತು.
ಬ್ರೆಝಿಲ್ ಪರವಾಗಿ 35 ಮತ್ತು 50ನೇ ನಿಮಿಷದಲ್ಲಿ ವಿನಿಶಿಯಸ್ ಜೂನಿಯರ್, 43ನೇ ನಿಮಿಷದಲ್ಲಿ ಸಾವಿಯೊ ಮತ್ತು 65ನೇ ನಿಮಿಷದಲ್ಲಿ ಲೂಕಸ್ ಪಕೇಟ ಗೋಲುಗಳನ್ನು ಬಾರಿಸಿದರು.
ಪರಾಗ್ವೆಯ ಏಕೈಕ ಗೋಲನ್ನು 48ನೇ ನಿಮಿಷದಲ್ಲಿಉಮರ್‍ಅಲ್ಡೆರೆಟ್ ಬಾರಿಸಿದರು.