×
Ad

ಭಾರತ ವಿಶ್ವಕಪ್ ಗೆದ್ದರೆ 100 ಕೋಟಿ ರೂ. ವಿತರಿಸುವೆ ಎಂದ ಆಸ್ಟ್ರೋಟಾಕ್ ಸಿಇಒ!

Update: 2023-11-18 23:12 IST

ಪುನೀತ್ ಗುಪ್ತಾ | Photo: instagram.com

ಹೊಸದಿಲ್ಲಿ : ಬಹುನಿರೀಕ್ಷಿತ ಭಾರತ-ಆಸ್ಟ್ರೇಲಿಯ ಏಕದಿನ ವಿಶ್ವಕಪ್ ಫೈನಲ್ ರವಿವಾರ ಅಹ್ಮದಾಬಾದ್ನಲ್ಲಿ ನಡೆಯಲಿದ್ದು, ಫೈನಲ್ ಆರಂಭಕ್ಕೆ ಮೊದಲೇ ಆಸ್ಟ್ರೋಟಾಕ್ ಸಿಇಒ ಪುನೀತ್ ಗುಪ್ತಾ ಅವರು ಭಾರತವು ಒಂದು ವೇಳೆ ವಿಶ್ವಕಪ್ ಎತ್ತಿದರೆ ಆಸ್ಟ್ರೋಟಾಕ್‌ ಬಳಕೆದಾರರಿಗೆ 100 ಕೋಟಿ ರೂ. ವಿತರಿಸುವುದಾಗಿ ಭರವಸೆ ನೀಡಿದ್ದಾರೆ.

ಲಿಂಕ್ಡ್ಇನ್ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಗುಪ್ತಾ, ಭಾರತವು 2011ರಲ್ಲಿ ಕೊನೆಯ ಬಾರಿ ವಿಶ್ವಕಪ್ ಜಯಿಸಿತ್ತು. ಆಗ ನಾನು ಕಾಲೇಜಿನಲ್ಲಿ ಓದುತ್ತಿದ್ದೆ. ಅದು ನನ್ನ ಜೀವನದ ಸಂತೋಷದ ದಿನವಾಗಿತ್ತು. ಪಂದ್ಯದ ಮುನ್ನಾದಿನ ನಾವು ನಿದ್ದೆ ಮಾಡಿರಲಿಲ್ಲ. ಇಡೀ ರಾತ್ರಿ ಪಂದ್ಯದ ಕುರಿತು ಚರ್ಚಿಸಿದ್ದೆವು ಎಂದರು.

ನಾನು ಇಂದು ಬೆಳಗ್ಗೆ ನನ್ನ ಹಣಕಾಸು ತಂಡದೊಂದಿಗೆ ಮಾತನಾಡಿದ್ದೇನೆ. ಭಾರತವು ವಿಶ್ವಕಪ್ ಗೆದ್ದರೆ ನಮ್ಮ ಬಳಕೆದಾರರಿಗೆ ಅವರ ವಾಲೆಟ್ಗಳಲ್ಲಿ 100 ಕೋ.ರೂ.ವನ್ನು ವಿತರಿಸುವುದಾಗಿ ವಾಗ್ದಾನ ಮಾಡಿದ್ದೇನೆ ಎಂದು ಗುಪ್ತಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News