×
Ad

ಟಿ20 ವಿಶ್ವಕಪ್ ಫೈನಲ್‍ನಲ್ಲೂ ಸೋತರೆ ರೋಹಿತ್ ಸಮುದ್ರಕ್ಕೆ ಹಾರಬಹುದು!: ಸೌರವ್ ಗಂಗುಲಿ

Update: 2024-06-29 21:41 IST

 ಸೌರವ್ ಗಂಗುಲಿ |  PC : NDTV



ಮುಂಬೈ : 2023ರಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್‍ನಲ್ಲಿ, ಉದ್ದಕ್ಕೂಅಜೇಯವಾಗಿದ್ದ ಭಾರತವುಆಸ್ಟ್ರೇಲಿಯದ ವಿರುದ್ಧ ಸೋಲನುಭವಿಸಿತ್ತು. ಈಗ ಐಸಿಸಿ ಪ್ರಶಸ್ತಿಗಳ ಬರವನ್ನು ನೀಗಿಸಲು ಭಾರತಕ್ಕೆ 2024ರ ಟಿ20 ವಿಶ್ವಕಪ್‍ನಲ್ಲಿ ಮತ್ತೊಂದು ಅವಕಾಶ ಎದುರಾಗಿದೆ. ಈ ಫೈನಲ್‍ನಲ್ಲೂ ಭಾರತ ಸೋತರೆತಂಡದ ನಾಯಕರೋಹಿತ್ ಶರ್ಮ ಬಾರ್ಬಡೋಸ್ ಸಮುದ್ರಕ್ಕೆ ಹಾರಬಹುದುಎಂದು ಭಾರತೀಯಕ್ರಿಕೆಟ್‍ತಂಡದ ಮಾಜಿ ನಾಯಕ ಸೌರವ್ ಗಂಗುಲಿ ಲಘು ಧಾಟಿಯಲ್ಲಿ ಶುಕ್ರವಾರ ಹೇಳಿದ್ದಾರೆ.

“ಅವರುಎರಡು ವಿಶ್ವಕಪ್ ಫೈನಲ್‍ಗಳಲ್ಲಿ ಆಡಿದ್ದಾರೆ. ಈ ಫೈನಲ್‍ಗಳಿಗೆ ಭಾರತವುಅಜೇಯವಾಗಿತಲುಪಿತ್ತು. ಅದುಅವರ ನಾಯಕತ್ವಗುಣವನ್ನು ಸಾರಿ ಹೇಳುತ್ತದೆ. ನಾನು ಬಿಸಿಸಿಐ ಅಧ್ಯಕ್ಷನಾಗಿದ್ದಾಗಅವರುತಂಡದ ನಾಯಕನಾಗಿ ಸಹಜವಾಗಿಯೇಆಯ್ಕೆಯಾದರು. ತಂಡದ ನಾಯಕನಾಗಿ ಮುಂದುವರಿಯಲು ವಿರಾಟ್‍ಕೊಹ್ಲಿ ಬಯಸದ ಹಿನ್ನೆಲೆಯಲ್ಲಿರೋಹಿತ್ ಆ ಸ್ಥಾನವನ್ನುತುಂಬಿದರು’’ ಎಂದು ಪಿಟಿಐಯೊಂದಿಗೆ ಮಾತನಾಡಿದ ಸೌರವ್ ಹೇಳಿದರು.

“ಅವರನ್ನು ನಾಯಕನಾಗಿ ಮಾಡಲುತುಂಬಾ ಸಮಯ ಬೇಕಾಯಿತು. ಯಾಕೆಂದರೆ ನಾಯಕತ್ವ ವಹಿಸಲು ಅವರು ಸಿದ್ಧರಾಗಿರಲಿಲ್ಲ. ಅವರನ್ನು ನಾಯಕನಾಗಿ ಮಾಡಲು ನಾವೆಲ್ಲತುಂಬಾಒತ್ತಡ ಹೇರಬೇಕಾಯಿತು. ಅವರ ನಾಯಕತ್ವದಲ್ಲಿ ಭಾರತೀಯಕ್ರಿಕೆಟ್‍ನಲ್ಲಿಆಗಿರುವ ಪ್ರಗತಿಯನ್ನುಕಂಡು ನನಗೆ ತುಂಬಾ ಸಂತೋಷವಾಗಿದೆ’’ ಎಂದು ಸೌರವ್ ಹೇಳಿದರು.

“ಏಳು ತಿಂಗಳ ಅವಧಿಯಲ್ಲಿಎರಡು ವಿಶ್ವಕಪ್ ಫೈನಲ್‍ಗಳನ್ನು ಅವರು ಸೋಲಬಹುದುಎಂದು ನನಗೆ ಅನಿಸುತ್ತಿಲ್ಲ. ಏಳು ತಿಂಗಳ ಅವಧಿಯಲ್ಲಿತನ್ನ ನಾಯಕತ್ವದಲ್ಲಿಎರಡು ಫೈನಲ್‍ಗಳನ್ನು ಅವರು ಸೋತರೆ, ಅವರು ಬಹುಷಃ ಬಾರ್ಬಡೋಸ್ ಸಮುದ್ರಕ್ಕೆ ಹಾರಬಹುದು. ಅವರು ಮುಂಚೂಣಿಯಲ್ಲಿ ನಿಂತುತಂಡವನ್ನು ಮುನ್ನಡೆಸಿದ್ದಾರೆ, ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅದು ನಾಳೆಯೂ ಮುಂದುವರಿಯುತ್ತದೆಎಂದು ನಾನು ಭಾವಿಸುತ್ತೇನೆ’’ ಎಂದು ಸೌರವ್ ಗಂಗುಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News