×
Ad

2023: ಭಾರತೀಯ ಕ್ರಿಕೆಟ್ ನ ಉದಯೋನ್ಮುಖ ತಾರೆಯರು

Update: 2023-12-30 23:40 IST

Rinku Singh (Facebook/RinkuSinghOfficial)

ಹೊಸದಿಲ್ಲಿ: ಭಾರತದ ಕ್ರಿಕೆಟ್ ರಂಗದಲ್ಲಿ 2023ನೇ ವರ್ಷದಲ್ಲಿ ಕೆಲವು ಉದಯೋನ್ಮುಖ ಆಟಗಾರರು ಉದಯಿಸಿದ್ದು, ಈ ಪೈಕಿ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್ ಹಾಗೂ ರಿಂಕು ಸಿಂಗ್ ಹೆಚ್ಚು ಗಮನ ಸೆಳೆದಿದ್ದಾರೆ.

► ಶುಭಮನ್ ಗಿಲ್


2023ರಲ್ಲಿ 2,000ಕ್ಕೂ ಅಧಿಕ ಅಂತರ್ರಾಷ್ಟ್ರೀಯ ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿರುವ ಶುಭಮನ್ ಗಿಲ್ ಏಕದಿನ ತಂಡದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡರು. 29 ಏಕದಿನ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ ಗಿಲ್ 5 ಶತಕ ಹಾಗೂ 9 ಅರ್ಧಶತಕಗಳ ಸಹಿತ ಒಟ್ಟು 1,584 ರನ್ ಗಳಿಸಿದ್ದಾರೆ.

► ರಿಂಕು ಸಿಂಗ್


26ರ ಹರೆಯದ ರಿಂಕು ಸಿಂಗ್ ಸಿಕ್ಸರ್ ಸಿಡಿಸುವ ಸಾಮಥ್ಯದ ಮೂಲಕ ಸೀಮಿತ ಓವರ್ ಕ್ರಿಕೆಟ್ ನ ಸ್ಪೆಷಲಿಸ್ಟ್ ಬ್ಯಾಟರ್ ಆಗಿದ್ದಾರೆ. ಎಡಗೈ ಬ್ಯಾಟರ್ ಟಿ-20 ಕ್ರಿಕೆಟ್ ನ 8 ಇನಿಂಗ್ಸ್ ಗಳಲ್ಲಿ ಒಟ್ಟು 262 ರನ್ ಗಳಿಸಿದ್ದಾರೆ.

► ಯಶಸ್ವಿ ಜೈಸ್ವಾಲ್:


ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕವನ್ನು ಸಿಡಿಸುವ ಮೂಲಕ 22ರ ಹರೆಯದ ಎಡಗೈ ಬ್ಯಾಟರ್ ಜೈಸ್ವಾಲ್ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ತನ್ನ ಆಗಮನವನ್ನು ಸಾರಿದ್ದರು. ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತದ 17ನೇ ಬ್ಯಾಟರ್ ಆಗಿದ್ದಾರೆ. 14 ಐಪಿಎಲ್ ಪಂದ್ಯಗಳಲ್ಲಿ 48ರ ಸರಾಸರಿಯಲ್ಲಿ ಒಟ್ಟು 625 ರನ್ ಗಳಿಸಿದ್ದಾರೆ.

► ತಿಲಕ್ ವರ್ಮಾ

Photo: © IPL (Main Image)

ಈ ವರ್ಷದ ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ತಿಲಕ್ ವರ್ಮಾ ಭಾರತದ ಏಕದಿನ ಹಾಗೂ ಟ್ವೆಂಟಿ-20 ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. 21ರ ಹರೆಯದ ಎಡಗೈ ಬ್ಯಾಟರ್ 14 ಟಿ-20 ಇನಿಂಗ್ಸ್ ಗಳಲ್ಲಿ 310 ರನ್ ಗಳಿಸಿದ್ದರು.

► ಮುಕೇಶ್ ಕುಮಾರ್

Mukesh Kumar (Image: BCCI)

ಬಲಗೈ ವೇಗದ ಬೌಲರ್ ಮುಕೇಶ್ ಕುಮಾರ್ ಈ ವರ್ಷಾರಂಭದಲ್ಲಿ ವೆಸ್ಟ್ಇಂಡೀಸ್ ಪ್ರವಾಸದ ವೇಳೆ ಎಲ್ಲ ಮೂರು ಮಾದರಿಯ ಅಂತರ್ರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆಗೈದಿದ್ದರು. ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್ನಲ್ಲಿ ನೀಡಿರುವ ಅತ್ಯುತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ ಅವರು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು. ಸ್ವಿಂಗ್ ಬೌಲಿಂಗ್ ಪ್ರಾವೀಣ್ಯತೆ ಹಾಗೂ ನಿರ್ಣಾಯಕ ವಿಕೆಟ್ ಪಡೆಯುವ ಸಾಮರ್ಥ್ಯದ ಮೂಲಕ ಭವಿಷ್ಯದ ಯಶಸ್ವಿ ಸ್ವಿಂಗ್ ಬೌಲರ್ ಆಗುವ ನಿರೀಕ್ಷೆ ಮೂಡಿಸಿದ್ದಾರೆ.

► ಜಿತೇಶ್ ಶರ್ಮಾ


ಫಿನಿಶಿಂಗ್ ಕೌಶಲ್ಯ ಹಾಗೂ ಕ್ಲೀನ್ ಹಿಟ್ಟಿಂಗ್ ಮೂಲಕ 30ರ ಹರೆಯದ ವಿಕೆಟ್ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಎಲ್ಲರ ಚಿತ್ತ ಸೆಳೆದಿದ್ದಾರೆ.ಆಸ್ಟ್ರೇಲಿಯ ವಿರುದ್ಧ ಸ್ವದೇಶದಲ್ಲಿ ನಡೆದಿದ್ದ ಟಿ-20 ಸರಣಿಯಲ್ಲಿ ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯನ್ನು ಪ್ರದರ್ಶಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News