2027ರ ಎ ಎಫ್ ಸಿ ಏಶ್ಯನ್ ಕಪ್ ಕ್ವಾಲಿಫೈಯರ್; ಭಾರತೀಯ ಪುರುಷರ ಫುಟ್ಬಾಲ್ ತಂಡ ಪ್ರಕಟ
PC : olympics.com
ಹೊಸದಿಲ್ಲಿ: ಚೀನಾದ ಹಾಂಕಾಂಗ್ ವಿರುದ್ಧದ 2027ರ ಆವೃತ್ತಿಯ ಎ ಎಫ್ ಸಿ ಏಶ್ಯನ್ ಕಪ್ ನ ಅಂತಿಮ ಸುತ್ತಿನ ನಿರ್ಣಾಯಕ ಅರ್ಹತಾ ಪಂದ್ಯಕ್ಕಾಗಿ 25 ಸದಸ್ಯರನ್ನು ಒಳಗೊಂಡ ಭಾರತೀಯ ಹಿರಿಯ ಪುರುಷರ ಫುಟ್ಬಾಲ್ ತಂಡವನ್ನು ಗುರುವಾರ ಪ್ರಕಟಿಸಲಾಗಿದೆ.
19ನೇ ಆವೃತ್ತಿಯ ಎ ಎಫ್ ಸಿ ಏಶ್ಯನ್ ಕಪ್ ಟೂರ್ನಿಯು 2027ರ ಜನವರಿ 7ರಿಂದ ಫೆಬ್ರವರಿ 5ರ ತನಕ ಸೌದಿ ಅರೇಬಿಯದಲ್ಲಿ ನಡೆಯಲಿದ್ದು, ಇದರಲ್ಲಿ 24 ತಂಡಗಳು ಭಾಗವಹಿಸಲಿವೆ.
ಬುಧವಾರ ನಡೆದ ಥಾಯ್ಲೆಂಡ್ ತಂಡದ ವಿರುದ್ಧದ ಫಿಫಾ ಅಂತರ್ ರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಭಾರತದ ಫುಟ್ಬಾಲ್ ತಂಡವು 0-2 ಅಂತರದಿಂದ ಸೋತಿತ್ತು.
2027ರ ಆವೃತ್ತಿಯ ಎ ಎಫ್ ಸಿ ಏಶ್ಯನ್ ಕಪ್ ನಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಭಾರತ ತಂಡವು ಹಾಂಕಾಂಗ್ ವಿರುದ್ಧ ಉತ್ತಮ ಫಲಿತಾಂಶ ಪಡೆಯುವ ಗುರಿ ಇಟ್ಟುಕೊಂಡಿದೆ.
ಭಾರತದ ಅರ್ಹತಾ ಅಭಿಯಾನಕ್ಕೆ ಈ ಪಂದ್ಯವು ಮಹತ್ವದ ಹೆಜ್ಜೆಯಾಗಿದ್ದು, ಆರಂಭಿಕ ಸುತ್ತಿನ ಪಂದ್ಯಗಳ ನಂತರ ಎಲ್ಲ ತಂಡಗಳು ತಮ್ಮ ಗುಂಪಿನಲ್ಲಿ ಸಮಾನ ಅಂಕ ಪಡೆದಿವೆ.
ಫಿಫಾ ಅಂತರ್ ರಾಷ್ಟ್ರೀಯ ಸೌಹಾರ್ದ ಪಂದ್ಯಕ್ಕಾಗಿ ಥಾಯ್ಲೆಂಡ್ ಗೆ ತೆರಳುವ ಮೊದಲು ಭಾರತೀಯ ಪುಟ್ಬಾಲ್ ತಂಡವು ಕೋಲ್ಕತಾದಲ್ಲಿ ತರಬೇತಿ ಪಡೆದಿತ್ತು.
ಇದೀಗ ಚೀನಾದ ಹಾಂಕಾಂಗ್ ವಿರುದ್ಧದ ಮುಂಬರುವ ಕ್ವಾಲಿಫೈಯರ್ ಪಂದ್ಯದತ್ತ ಭಾರತ ತಂಡವು ತನ್ನೆಲ್ಲಾ ಗಮನ ಕೇಂದ್ರೀಕರಿಸಿದೆ. ಈ ಪಂದ್ಯದಲ್ಲಿ ಭಾರತವು ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದೆ.
►ಭಾರತದ ಫುಟ್ಬಾಲ್ ತಂಡ
ಗೋಲ್‌ಕೀಪರ್‌ಗಳು: ವಿಶಾಲ್ ಕೈತ್, ಗುರ್ಮೀತ್ ಸಿಂಗ್, ಅಮರಿಂದರ್ ಸಿಂಗ್.
ಡಿಫೆಂಡರ್‌ಗಳು: ರೋಶನ್ ಸಿಂಗ್, ರಾಹುಲ್ ಭೀಕೆ, ಚಿಂಗ್ಲೆನ್‌ಸನಾ ಸಿಂಗ್, ಅನ್ವರ್ ಅಲಿ, ಬೊರಿಸ್ ಸಿಂಗ್, ಸಂದೇಶ್ ಜಿಂಗಾನ್, ಆಶೀಶ್ ರೈ, ಅಭಿಷೇಕ್ ಸಿಂಗ್.
ಮಿಡ್ ಫೀಲ್ಡರ್ ಗಳು: ಸುರೇಶ್ ಸಿಂಗ್, ಮಹೇಶ್ ಸಿಂಗ್, ನಿಖಿಲ್ ಪ್ರಭು, ಆಯುಷ್ ದೇವ್ ಚೆಟ್ರಿ, ಉದಾಂತ ಸಿಂಗ್, ಲಾಲೆಂಗ್ಮಾವಿಯಾ ರಾಲ್ಟೆ , ಲಿಸ್ಟನ್ ಕೊಲಾಕೊ, ಆಶೀಕ್ ಕುರುನಿಯನ್, ಬ್ರೆಂಡನ್ ಫೆರ್ನಾಂಡಿಸ್.
ಫಾರ್ವರ್ಡ್ ಗಳು: ಸುನೀಲ್ ಚೆಟ್ರಿ, ಎಡ್ಮಂಡ್ ಲಾಲ್ ರಿಂಡಿಕಾ, ಮನ್ವೀರ್ ಸಿಂಗ್, ಸುಹೈಲ್ ಅಹ್ಮದ್, ಲಾಲ್ ಲಿಯಾಂಝುಯಲಾ ಚಾಂಗ್ಟೆ.