×
Ad

2030ರ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯಕ್ಕೆ ಅಹ್ಮದಾಬಾದ್ ನಗರ ಶಿಫಾರಸು

Update: 2025-10-15 21:48 IST

Photo Credi : NDTV  

ಹೊಸದಿಲ್ಲಿ,ಅ.15: 2030ರ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್‌ನ ಸಂಭಾವ್ಯ ಆತಿಥೇಯ ನಗರವನ್ನಾಗಿ ಅಹ್ಮದಾಬಾದ್ ಅನ್ನು ಬುಧವಾರ ಶಿಫಾರಸು ಮಾಡಲಾಗಿದೆ ಎಂದು ಕಾಮನ್‌ವೆಲ್ತ್ ಸ್ಪೋರ್ಟ್ ಕಾರ್ಯಕಾರಿ ಮಂಡಳಿಯು ದೃಢಪಡಿಸಿದೆ. ಈ ಕುರಿತು ನವೆಂಬರ್ 26ರಂದು ಗ್ಲಾಸ್ಗೊದಲ್ಲಿ ನಡೆಯಲಿರುವ ಮಂಡಳಿಯ ಸಾಮಾನ್ಯ ಮಹಾಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಭಾರತ ಈ ಹಿಂದೆ 2010ರಲ್ಲಿ ಹೊಸದಿಲ್ಲಿಯಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯವಹಿಸಿತ್ತು. ಇದರೊಂದಿಗೆ ಮೊದಲ ಬಾರಿ ಬಹು ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಿತ್ತು.

ಆತಿಥೇಯತ್ವದ ಹಕ್ಕಿಗಾಗಿ ಭಾರತವು ನೈಜೀರಿಯಾದಿಂದ ಸ್ಪರ್ಧೆ ಎದುರಿಸುತ್ತಿದೆ. 2034ರ ಗೇಮ್ಸ್ ಸಹಿತ ಭವಿಷ್ಯದ ಗೇಮ್ಸ್‌ಗಾಗಿ ನೈಜೀರಿಯಾದ ಗುರಿಯನ್ನು ಅಭಿವೃದ್ಧ್ದಿಪಡಿಸಲು ರಣನೀತಿಯನ್ನು ರೂಪಿಸುತ್ತಿರುವುದಾಗಿ ಕಾಮನ್‌ವೆಲ್ತ್ ಸ್ಪೋರ್ಟ್ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News