ಭಾರತದ ಪರ 2ನೇ ವೇಗದ ಟಿ-20 ಶತಕ ಗಳಿಸಿದ ಅಭಿಷೇಕ್ ಶರ್ಮಾ
ಅಭಿಷೇಕ್ ಶರ್ಮಾ | PC: PTI
ಮುಂಬೈ: ಸ್ಫೋಟಕ ಶೈಲಿಯ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ರವಿವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಎರಡನೇ ವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡರು.
ಇಂಗ್ಲೆಂಡ್ ವೇಗಿಗಳನ್ನು ಹಿಗ್ಗಾಮುಗ್ಗ ದಂಡಿಸಿದ ಅಭಿಷೇಕ್ ಕೇವಲ 37 ಎಸೆತಗಳಲ್ಲಿ ತನ್ನ 2ನೇ ಟಿ-20 ಶತಕ ಪೂರೈಸಿದರು.
270.27ರ ಸ್ಟ್ರೈಕ್‌ರೇಟ್‌ನಲ್ಲಿ 5 ಬೌಂಡರಿ ಹಾಗೂ 10 ಸಿಕ್ಸರ್‌ಗಳ ನೆರವಿನಿಂದ ಅಭಿಷೇಕ್ ಶತಕ ಪೂರೈಸಿದರು. ಎಡಗೈ ಬ್ಯಾಟರ್ 11ನೇ ಓವರ್‌ನಲ್ಲಿ ಬ್ರೆಂಡನ್ ಕಾರ್ಸ್ ಎಸೆತದಲ್ಲಿ ಒಂಟಿ ರನ್ ಗಳಿಸಿ 100 ರನ್ ಗಳಿಸಿದರು.
ಅಭಿಷೇಕ್ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ವೇಗವಾಗಿ ಶತಕ ಸಿಡಿಸಿದ ಭಾರತದ 2ನೇ ಹಾಗೂ ವಿಶ್ವದ 3ನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು.
ಮಾಜಿ ನಾಯಕ ರೋಹಿತ್ ಶರ್ಮಾ 2017ರಲ್ಲಿ ಇಂದೋರ್‌ನಲ್ಲಿ ಶ್ರೀಲಂಕಾ ವಿರುದ್ಧ ವೇಗದ ಟಿ-20 ಶತಕ(35 ಎಸೆತ)ಸಿಡಿಸಿದ ಭಾರತದ ಮೊದಲ ಆಟಗಾರನಾಗಿದ್ದಾರೆ.
ಅಭಿಷೇಕ್ ಕೇವಲ 54 ಎಸೆತಗಳಲ್ಲಿ 7 ಬೌಂಡರಿ ಹಾಗೂ 13 ಸಿಕ್ಸರ್‌ಗಳ ಸಹಾಯದಿಂದ 135 ರನ್ ಗಳಿಸಿ ರಶೀದ್‌ಗೆ ವಿಕೆಟ್ ಒಪ್ಪಿಸಿದರು.